ಪ್ರಾರಂಭ
ರಾಜ್ಯದ ಎರಡನೇ ರಾಜ್ಯಧಾನಿ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿ ಜಿಲ್ಲೆ ಸಿಹಿ ಪ್ರೀಯರ ಕುಂದಾನಗರಿ ಎಂದೇ ಕರೆಯಲಾಗುತ್ತದೆ. ಇತ್ತ ಮಲೆನಾಡಿನ ಸೊಬಗು ಅತ್ತ ಬಯಲುಸೀಮೆಯ ಪರಂಪರೆ ಹೊಂದಿರುವ ನಮ್ಮ ಬೆಳಗಾವಿ, ರಾಜ್ಯದಲ್ಲೆ ಎರಡನೇ ಅತೀ ದೊಡ್ಡ ಜಿಲ್ಲೆ…..!
ಆಡಳಿತಾತ್ಮಕ ದೃಷ್ಟಿಯಿಂದ ನಿರ್ಮಾಣವಾಗಿರುವ ಬೆಳಗಾವಿ ಸುವರ್ಣ ಸೌಧ ನೋಡುಗರ ಗಮನ ಸೆಳೆಯುತ್ತದೆ. ಇತ್ತ ಉತ್ತಮ ವಿಮಾನಯಾನ ಸೌಲಭ್ಯವನ್ನು ಹೊಂದಿರುವ ಜಿಲ್ಲೆಯೂ ಹೌದು. ಜೊತೆಗೆ ಬೆಂಗಳೂರಿನಿಂದ ಪುಣೆ ಹೋಗುವ ರಾಷ್ಟ್ರೀಯ ಹೆದ್ದಾರಿ NH 4 ಕುಂದಾನಗರಿ ಸೌಂದರ್ಯವನ್ನು ಮತ್ತಷ್ಟು ಹೆಚ್ಚಾಗಿಸಿದೆ.
ಇನ್ನೂ ಐತಿಹಾಸಿಕ ಘಟನೆಗಳಿಗೂ ನಮ್ಮ ಕುಂದಾನಗರಿ ಸಾಕ್ಷಿಯಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಬೆಳವಡಿ ಮಲ್ಲಮ್ಮನವರ ಕರ್ಮಭೂಮಿ ಬೆಳಗಾವಿ. ಅದೇ ರೀತಿ ಹಿಂದವಿ ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪಾದಸ್ಪರ್ಶವಾಗಿರುವ ಪುಣ್ಯ ಕ್ಷೇತ್ರ ಇದು.
ಅಷ್ಟೇ ಅಲ್ಲದೆ. ಜಗತ್ತಿಗೆ ಹಿಂದೂ ಧರ್ಮದ ಮಹತ್ವ ಸಾರಿದ್ದ ಸ್ವಾಮೀ ವಿವೇಕಾನಂದರು ಅಂದಿನ ದಿನಗಳಲ್ಲಿ ಬೆಳಗಾವಿಗೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿಜಿ 1924 ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಇತಿಹಾಸದ ಪುಟದಲ್ಲಿ ಅಚ್ಚಳಿಯದಂತೆ ಉಳಿದಿದೆ. ಅಷ್ಟೇ ಅಲ್ಲದೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರರ ತವರೂರು ಬೆಳಗಾವಿ…..
ಇನ್ನೂ ಅನೇಕ ಹಬ್ಬಳಿಗೂ ಬೆಳಗಾವಿ ಹೆಸರುವಾಸಿ. ಪ್ರತಿವರ್ಷ ನವೆಂಬರ್ ಒಂದರಂದು ನಡೆಯುವ, ಕರ್ನಾಟಕ ರಾಜ್ಯೋತ್ಸವ ಸಡಗರವನ್ನು ಎರಡು ಕಣ್ಣುಗಳಿಂದ ನೋಡುವುದೇ ಸಡಗರ. ಅಷ್ಟೇ ಅಲ್ಲದೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಾಗೂ ಗಣೇಶೋತ್ಸವದ ಆಚರಣೆಗಳನ್ನು ಕಣ್ತುಂಬಿಕೊಳ್ಳಲು, ರಾಜ್ಯದ ನಾನಾ ಭಾಗಗಳಿಂದ ಜನರು ಬರುತ್ತಾರೆ.
ಇದಕ್ಕೂ ಮಿಗಿಲಾಗಿ ಭಾರತೀಯ ಸೈನ್ಯದಲ್ಲಿ ತನ್ನದೇ ಪ್ರಾಭಲ್ಯ ಹೊಂದಿರುವ ಮರಾಠಾ ಲೈಟ್ ಇನ್ ಫೆಂಟ್ರಿ ರೆಜಿಮೆಂಟ್ ಕ್ಯಾಂಪ್ ಹಾಗೂ ಭಾರತೀಯ ವಾಯು ಸೇನೆಗೆ ಸಂಬಂಧಿಸಿದ ತರಬೇತಿಯು ಕುಂದಾನಗರಿಯಲ್ಲಿ ನಡೆಯುವುದು ವಿಶೇಷ. ಅಷ್ಟೇ ಅಲ್ಲದೆ ಧಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಯೋಧರನ್ನು ನೀಡುತ್ತಿರುವ ಜಿಲ್ಲೆಯಲ್ಲಿಯಿಯೂ ಬೆಳಗಾವಿ ಮುಂಚೂನಿಯಲ್ಲಿರುವುದು ವಿಶೇಷ.
ಇನ್ನೂ ಮಲೆನಾಡಿನ ಹಚ್ಚಹಸಿರಿನ ಸೊಬಗನ್ನು ಹೊಂದಿರುವ ಬೆಳಗಾವಿ ಗೋವಾ ಹಾಗೂ ಮಹಾರಾಷ್ಟ್ರದ ಸಹ್ಯಾದ್ರಿ ತಪ್ಪಲಿಗೆ ಹೊಂದಿಕೊಂಡಿದೆ. ಜೊತೆಗೆ ಭೋರ್ಗರೆಯುವ ಗೋಕಾಕ್ ಜಲಪಾತ ಸೇರಿದಂತೆ ಅನೇಕ ಪ್ರಕೃತಿ ಸೌಂದರ್ಯವನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ವಿಭಿನ್ನ ಜಿಲ್ಲೆ ಬೆಳಗಾವಿ ಎಂದರೆ ತಪ್ಪಾಗಲಾರದು.
ಜೊತೆಗೆ ಧಾರ್ಮಿಕವಾಗಿ ಅತ್ಯಂತ ಶ್ರೀಮಂತ ಪರಂಪರೆ ಹೊಂದಿರುವ ಜಿಲ್ಲೆ ಬೆಳಗಾವಿ…… ಸವದತ್ತಿ ಎಲ್ಲಮ್ಮ….ಖಿಳೇಗಾಂವಿ ಬಸವೇಶ್ವರ ದೇವಸ್ಥಾನ…ರಾಣಿ ಚೆನ್ನಮ್ಮನ ಸಮಾಧಿ, ಚಿಂಚಲಿ ಮಾಯಕ್ಕಾ ದೇವಸ್ಥಾನ, ಹುಕ್ಕೇರಿ ಹಿರೇಮಠ.. ಕೊಕಟನೂರ ಯಲ್ಲಮ್ಮ ದೇವಸ್ಥಾನ…. ಮುಗಳಕೋಡ ಜಿಡ್ಗಾ ಮಠ…ಸೇರಿದಂತೆ ಅನೇಕ ದಾರ್ಮಿಕ ಕ್ಷೇತ್ರಗಳ ತವರೂರು ಬೆಳಗಾವಿ….
ಕಲೆ, ಸಾಹಿತ್ಯ,, ಸಂಸ್ಕೃತಿಗಳ ಮೂಲ ತಾನವಾಗಿರುವ ಬೆಳಗಾವಿಯ ಮಹತ್ವವನ್ನು ಸಾರುವ ಉದ್ದೇಶದಿಂದ ಬೆಳಗಾವಿ ವೈಸ್ ಎಂಬ ಸುದ್ದೀ ಪೋರ್ಟಲ್ ಪ್ರಾರಂಭಿಸಲಾಗಿದೆ. ಜೊತೆಗೆ ರಾಜಕೀಯವಾಗಿಯೂ ಹಾಗೂ ಶೈಕ್ಷಣಿಕವಾಗಿ ಮುಂದೆ ಇರುವ ಜಿಲ್ಲೆಯ ಕ್ಷಣ ಕ್ಷಣದ ಸುದ್ದಿ ನೀಡುವುದರ ಜೊತೆಗೆ ನಮ್ಮ ಕನ್ನಡ ನಾಡಿನ ಅಸ್ಮಿತೆ ಕಾಪಾಡುವ ಕೆಲಸ ಮಾಡುತ್ತೇವೆ ಎಂಬ ಪ್ರಮಾಣದೊಂದಿದೆ ಈ ಕೆಲಸಕ್ಕೆ ತಮ್ಮೇಲರ ಬೆಂಬಲ ಇರಲಿ ಎಂಬುದು ನಮ್ಮ ಆಶಯ……!