ಹಾಸನ : ಹೆತ್ತ ಮಗಳು ಪ್ರಾಣ ಕಳೆದುಕೊಂಡ ನೋವಿನಲ್ಲಿ‌ ಕುಟುಂಬ ಇದ್ದರೂ ಮಹತ್ವದ ನಿರ್ಧಾರ ಕೈಗೊಂಡಿದೆ. 18 ವರ್ಷದ ಯುವತಿಯ ಅಂಗಾಂಗ ದಾನ ಮಾಡುವ ಮೂಲಕ‌ ಮತ್ತೊಬ್ಬರ ಬಾಳಿಗೆ ಬೆಳಕಾಗುವ ನಿರ್ಧಾರ ತಗೆದುಕೊಂಡಿದ್ದಾರೆ.

ಹೌದು ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು‌ ಮೆದುಳು‌ ನಿಷ್ಕ್ರಿಯಗೊಂಡಿದ್ದ ಅರಸೀಕೆರೆ ತಾಲೂಕಿನ ಕಾರೇಹಳ್ಳಿ‌ ಗ್ರಾಮದ ನಿವಾಸಿ ಮೋನಿಕಾ‌ (18) ಮೃತಪಟ್ಟ ಯುವತಿ.

ಏಪ್ರಿಲ್ 5 ರ ಸಂಜೆ ಬಿ.ಹೆಚ್ ರಸ್ತೆಯ ಎಪಿಎಂಸಿ ಮಾರುಕಟ್ಟೆ ಹತ್ತಿರ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಮೋನಿಕಾಳಿಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಸಧ್ಯ ಯುವತಿಯ ಅಂಗಾಂಗವನ್ನು ಪೋಷಕರು ದಾನ ಮಾಡಿದ್ದಾರೆ. ಇದರಿಂದ ಐವರ ಬಾಳಲ್ಲಿ ಬೆಳಕು ‌ಮೂಡಿದ್ದು‌ ಇವರ ನಿರ್ಧಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.