ಶಾಸಕ ಕೌಜಲಗಿಗೆ ಕ್ಷೇತ್ರಕ್ಕೆ ಅನುದಾನ ತರುವ ನೈಪುಣ್ಯತೆ ಇದೆ : ಸಚಿವ ಗುಂಡೂರಾವ
ಬೈಲಹೊಂಗಲ : ತಾಯಿ ಮತ್ತು ಮಗುವಿನ ಆರೋಗ್ಯದ ಹಿತದೃಷ್ಟಿ ಇಟ್ಟುಕೊಂಡು ಕೇಂದ್ರ, ರಾಜ್ಯ ಸರ್ಕಾರ ಆಸ್ಪತ್ರೆ ನಿರ್ಮಾಣ ಮಾಡಿದ್ದು ಇದಕ್ಕೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ದವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ ಹೇಳಿದರು.
ಅವರು ಶನಿವಾರ ಪಟ್ಟಣದ ದೇವಲಾಪುರ ರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಜಿಲ್ಲಾಡಳಿತ, ಜಿಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್ ಎಚ್ ಎಂ) ಅಡಿಯಲ್ಲಿ ೧೦೦ ಹಾಸಿಗೆಗಳ ತಾಯಿ ಮತ್ತು ಮಗು ಆಸ್ಪತ್ರೆಯ ನೂತನ ಕಟ್ಟಡದ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ.
ತಾಯಿ ಆರೋಗ್ಯ ಚೆನ್ನಾಗಿದ್ದಾರೆ ಮಾತ್ರ ಮಗುವಿನ ಆರೋಗ್ಯ ಸದೃಡವಾಗಿರಲು ಸಾಧ್ಯ. ಶಿಕ್ಷಣ ಮತ್ತು ಆರೋಗ್ಯ ಚೆನ್ನಾಗಿದ್ದರೆ ಮೊದಲು ನಾವು ಆರೋಗ್ಯವಂತರಾಗಿರಬೇಕು. ಜನತೆ ಆರೋಗ್ಯವಂತರಾಗಿದ್ದರೆ ದೇಶ ಚೆನ್ನಾಗಿರುತ್ತೆ. ವೈದ್ಯ ಮತ್ತು ಸಿಬ್ಬಂದಿ ನೇಮಕ ಮಾಡಲು ಆಧ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗವುದು.
ಈ ಭಾಗದ ಶಾಸಕ ಮಹಾಂತೇಶ ಕೌಜಲಗಿ ಸದಾ ಅಭಿವೃದ್ದಿ ಪರ ಕನಸು ಕಂಡು ಸಚಿವರ ಮೇಲೆ ಒತ್ತಡ ಹಾಕಿ ಅನುದಾನ ಬಿಡುಗಡೆ ಮಾಡಿಸುವಲ್ಲಿ ನಿಪುಣರಾಗಿದ್ದಾರೆ ಎಂದರು. ಇವರ ಬೇಡಿಕೆ ಈಡೇರಿಸಲು ಪ್ರಾಮಾಣ ಕವಾಗಿ ಪ್ರಯತ್ನ ಮಾಡಲಾಗುವುದು. ಚೆನ್ನಮ್ಮನ ಕಿತ್ತೂರಿನಲ್ಲಿ ಆಸ್ಪತ್ರೆ ನಿರ್ಮಿಸಲು ಶೀಘ್ರದಲ್ಲಿ ಭೂಮಿ ಪೂಜೆ ನೆರವೇರಿಸಲಾಗವುದು.
ರಾಜ್ಯದಲ್ಲಿ ಬೆಳಗಾವಿ ಅತೀ ದೊಡ್ಡ ಜಿಲ್ಲೆಯಾಗಿದ್ದರಿಂದ ಆದ್ಯತೆ ಮೇರೆಗೆ ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗವುದು ಎಂದರು. ಸಾರ್ವಜನಿಕ ಆಸ್ಪತ್ರೆಯ ದುರಸ್ಥಿಗಾಗಿ ರೂ.೪.೫೦ ಕೋಟಿ ಅನುದಾನ ನೀಡಲಾಗಿದೆ ಎಂದರು.
ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗದ ಜನತೆಗೆ ೧೦೦ ಹಾಸಿಗೆಗಳ ತಾಯಿ ಮತ್ತು ಮಗು ಆಸ್ಪತ್ರೆ ಆಗಬೇಕನ್ನುವುದು ಬೇಡಿಕೆ ಇತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಕಟ್ಟಡ ನಿರ್ಮಿಸಿ ಲೋಕಾರ್ಪಣೆಗೊಂಡಿರುವುದು ಸಂತಸವಾಗಿದೆ. ವೈದ್ಯ, ಸಿಬ್ಬಂದಿಗಳ ನೇಮಕ ಮಾಡಲು ನಿಯಮಗಳನ್ನು ಸರಳೀಕರಣಗೊಳಿಸಬೇಕು ಎಂದರು.
ಸಾರ್ವಜನಿಕ ಆಸ್ಪತ್ರೆಯು ಖಾತ್ರಿ ಗುಣಮಟ್ಟದ ಅಡಿಯಲ್ಲಿ ಕಾಯಕಲ್ಪ ಪ್ರಶಸ್ತಿ, ಲಕ್ಷö್ಯ ಪ್ರಶಸ್ತಿ ಮತ್ತು ಎನ್ ಕ್ಯೂ ಯು ಎಸ್ ರಾಜ್ಯಕ್ಕೆ ೩ ನೇ ಸ್ಥಾನ, ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದು ಇದಕ್ಕೆ ವೈದ್ಯರ, ಸಿಬ್ಬಂದಿಗಳ ಸೇವಾಮನೋಭಾವನೆ ಮೂಲಕ ಕಾರಣವಾಗಿದೆ ಎಂದರಲ್ಲದೇ ಸಚಿವರಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಅನುದಾನ ನೀಡಬೇಕೆಂದು ಒತ್ತಾಯಿಸಿದರು.
ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಮೃಣಾಲ ಹೆಬ್ಬಾಳಕರ, ಆಯುಕ್ತ ಡಿ.ರಣದೀಪ, ನಿರ್ದೇಶಕ ಡಾ.ಜಿ.ಎನ್.ಶ್ರೀನಿವಾಸ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಕೋಣಿ , ಡಾ.ಎಸ್.ವ್ಹಿ.ಮುನ್ಯಾಳ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ವಿನಯ ನಾವಲಗಟ್ಟಿ, ಬಸವರಾಜ ಜನ್ಮಟ್ಟಿ, ಶಂಕರಗೌಡ ಪಾಟೀಲ, ಶಿವರುದ್ರಪ್ಪ ಹಟ್ಟಿಹೊಳಿ, ಡಾ.ಸಂಜಯ ಸಿದ್ದನ್ನವರ, ಡಾ.ನಿರ್ಮಲಾ ಮಹಾಂತಶೆಟ್ಟಿ ಅನೇಕರು ಇದ್ದರು.
ಈ ಸಂದರ್ಭದಲ್ಲಿ ಆಸ್ಪತ್ರೆ ನಿರ್ಮಿಸಿದ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು.
ಡಾ.ನಿರ್ಮಲಾ ಮಹಾಂತಶೆಟ್ಟಿ ಸ್ವಾಗತಿಸಿದರು, ಶಿಕ್ಷಕಿ ಮಹಾದೇವಿ ಅಂಗಡಿ ನಿರೂಪಿಸಿದರು, ಡಾ.ಅಗ್ನಿಹೋತ್ರಿ ವಂದಿಸಿದರು. ಮಹಾದೇವಿ ಮೂಲಿಮನಿ ಸಂಗಡಿಗರಿAದ ಪ್ರಾರ್ಥಿಸಿದರು, ಲಿಟ್ಲ ಹಾರ್ಟ್ಸ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಈ ಸಂದರ್ಬದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು, ಗಣ್ಯ ಮಾನ್ಯರು ಇದ್ದರು.