ವರ್ಗಾವಣೆ ದಂಧೆಗೆ ಬಲಿಯಾದ್ರಾ ಪಿಎಸ್ಐ ಪರಶುರಾಮ…?
ಯಾದಗಿರಿ : ನನ್ನ ಪತಿಗೆ ವರ್ಗಾವಣೆ ಹೆಸರಿನಲ್ಲಿ ಒತ್ತಡ ಹೇರಲಾಗಿತ್ತು, ಶಾಸಕರು ಲಕ್ಷಾಂತರ ಹಣ ನೀಡುವಂತೆ ನನ್ನ ಗಂಡನನ್ನು ಪೀಡಿಸುತ್ತಿದ್ದರು. ನನ್ನ ಗಂಡನ ಸಾವಿಗೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಆತನ ಪುತ್ರ
ಸನ್ನಿರೆಡ್ಡಿ ಕಾರಣ ಎಂದು ಮೃತ ಪಿಎಸ್ಐ ಪರಶುರಾಮ ಪತ್ನಿ ದೂರು ದಾಖಲಸಿದ್ದಾಳೆ.
ಕಳೆದ ವರ್ಷವೇ ಯಾದಗಿರಿ ನಗರ ಪೊಲೀಸ್ ಠಾಣೆಗೆ ಸುಮಾರು 30 ಲಕ್ಷ ಹಣ ನೀಡಿ ಪಿಎಸ್ಐ ಪರಶುರಾಮ ವರ್ಗಾವಣೆ ಆಗಿದ್ದರು, ನಂತರ ಶಾಸಕರ ಒತ್ತಡದಿಂದ ನಿಯಮ ಬಾಹಿರಾಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ನನ್ನ ಗಂಡ ಪ್ರಾಣ ಬಿಟ್ಟಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ.
ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದರು. ಪಿಎಸ್ಐ ಪರಶುರಾಮ್ ಅವರು ಸೈಬರ್ ಕ್ರೈಮ್ ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದರು. ಮೊನ್ನೆ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ನಿನ್ನೆ ಸಂಜೆ ಪೊಲೀಸ್ ಕ್ವಾಟರ್ಸ್ ನಿವಾಸದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಪಿಎಸ್ಐ ಸಾವಿನಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ ಹಾಗೂ ಅವರ ಪುತ್ರ ಸನ್ನಿರೆಡ್ಡಿ ಪಾಟೀಲ ಕೈವಾಡ ಇರುವುದಾಗಿ ಮೃತ ಪಿಎಸ್ಐ ಪತ್ನಿ ದೂರು ನೀಡಿರುವ ಹಿನ್ನಲೆಯಲ್ಲಿ ಶಾಸಕ ಹಾಗೂ ಪುತ್ರ ಸನ್ನಿರೆಡ್ಡಿ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.