ಡಿಕೆಶಿಗೆ ಮಂಗಳೂರು ಕುಕ್ಕರ್ ಮೇಲೂ ಪ್ರೀತಿ ಬೆಳಗಾವಿ ಕುಕ್ಕರ್ ಮೇಲೂ ಪ್ರೀತಿ – ಯತ್ನಾಳ್ ವ್ಯಂಗ್ಯ
ಕಲಬುರಗಿ : ಮಂಗಳೂರು ಕುಕ್ಕರ್ ಬಾಂಬಾ ಬ್ಲಾಸ್ಟ್ ಕುರಿತಾಗಿ ಉಗ್ರಗ್ರಾಮಿ ಪರ ಹೇಳಿಕೆ ನೀಡಿದ್ದ ಡಿ.ಕೆ ಶಿವಕುಮಾರ್ ಅವರ ಕುರಿತು ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ಡಿಕೆಶಿಗೆ ಮಂಗಳೂರು ಕುಕ್ಕರ್ ಮೇಲೂ ಪ್ರೀತಿ ಹಾಗೆ ಬೆಳಗಾವಿ ಕುಕ್ಕರ್ ಮೇಲೂ ಪ್ರೀತಿ ಎಲ್ಲಾ ಕುಕ್ಕರ್ ಮೇಲೂ ಪ್ರೀತಿ ಎಂದು ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರನ್ನು ಉದ್ದೇಶಿಸಿ ಮಾತನಾಡಿದ ಇವರು. ಉಗ್ರರ ಪರ ನಿಲ್ಲುವವರು ಯಾವಾಗಲೂ ಉಗ್ರರೇ. ಇವರಿಗೆ ದೇಶ ಹಾಗೂ ಇಲ್ಲಿನ ಹಿಂದೂಗಳು ಬೇಕಿಲ್ಲ. ಹಿಂದೂಗಳಿಗೆ ನೋವಾಗಿದ್ದರ ಬಗ್ಗೆ ಖಂಡಿಸುವುದಿಲ್ಲ. ಹಿಂದೂ ಯುವತಿಯನ್ನು ಕತ್ತರಿಸಿ ಕೊಲೆ ಮಾಡಿದವನ ವಿರುದ್ಧ ಕಾಂಗ್ರೆಸ್ ನವರು ಮಾತನಾಡಲಿಲ್ಲ. ಆದರೆ ಮುಸ್ಲಿಂಮರಿಗೆ ಏನಾದರು ಆದರೆ ಸೋನಿಯಾ ಗಾಂಧಿ ರಸ್ತೆಗೆ ಬಂದು ನಿಲ್ಲುತ್ತಾಳೆ ಎಂದರು.
ನಕಲಿ ಮತದಾರರನ್ನು ತೆಗೆದು ಹಾಕುವ ಕೆಲಸ ನಡೆಯುತ್ತಿದೆ. ಮೂರು ಕಡೆಗಳಲ್ಲಿ ಸುಳ್ಳು ಮತದಾನ ಮಾಡುವವರನ್ನು ಗುರುತಿಸಿ ಅಳಿಸಿ ಹಾಕಲಾಗುತ್ತದೆ ಮುಂಬರುವ ದಿನಗಳಲ್ಲಿ ನಾಗರಿಕ ಏಕರೂಪ ಸಂಹಿತೆ ಜಾರಿ ಆಗಲಿದೆ ಎಂದರು.