
ಯತ್ನಾಳ್ ಭಾಷಣದ ವೇಳೆ ಅವಘಡ ; ಮಚ್ಚು ಹಿಡಿದು ವೇದಿಕೆಯತ್ತ ಓಡಿಬಂದ ಅಪರಿಚಿತ

ರಾಯಚೂರು : ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಭಾಷಣ ಮಾಡುವ ವೇಳೆ ಅಪರಿಚಿತ ವ್ಯಕ್ತಿಯೋರ್ವ ಕೈಯಲ್ಲಿ ಚಾಕು ಹಿಡಿದು ವೇದಿಕೆಯತ್ತ ಓಡಿಬಂದ ಘಟನೆ ಭಾನುವಾರ ನಡೆದಿದೆ.
ರಾಯಚೂರಿನಲ್ಲಿ ನಡೆದ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಭಾಷಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮಾರಕಾಸ್ತ್ರ ಹಿಡಿದು ವ್ಯಕ್ತಿ ವೇದಿಕೆಗೆ ಬಂದಿದ್ದಾನೆ.
ಶ್ರೀನಿವಾಸ ಪೂಜಾರಿ ಉಪ್ಪಾರ್ ಎಂಬುವವ ಬಂದಿತ ವ್ಯಕ್ತಿ. ವೇದಿಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಕ್ಷಣಕಾಲ ಗೊಂದಲದ ವಾತಾವರಣ ಮೂಡಿತ್ತು.
ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ವೇದಿಕೆಯಲ್ಲಿ ಯತ್ನಾಳ್ ಜೊತೆ ಪ್ರಮೋದ್ ಮುತಾಲಿಕ್ ಸೇರಿ ಅನೇಕರು ಉಪಸ್ಥಿತರಿದ್ದರು.