
ಬೆಳಗಾವಿ : ಹಳಿ ತಪ್ಪಿ ಪಲ್ಟಿ ಹೊಡೆದ ಗೂಡ್ಸ್ ರೈಲು ಬೋಗಿ

ಬೆಳಗಾವಿ : ಚಲಿಸುತ್ತಿದ್ದ ರೈಲು ಹಳಿ ತಪ್ಪಿದ ಪರಿಣಾಮ ಗೂಡ್ಸ್ ರೈಲಿನ ಬೋಗಿ ಪಲ್ಟಿಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಗರದ ಮಿಲಿಟರಿ ಮಾಹಾದೇವ್ ಟೆಂಪಲ್ ಸಮೀಪದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ರೈಲು ಹಳಿ ಪಲ್ಟಿಯಾಗಿದ್ದಕ್ಕೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಜಿಂದಾಲ್ ನಿಂದ ಮಿರಜ್ ಕಡೆಗೆ ರೈಲು ಸಂಚರಿಸುವ ವೇಳೆ ದುರ್ಘಟನೆ ಸಂಭವಿಸಿದ್ದು, ಸ್ಥಳಕ್ಕೆ ರೈಲು ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.