Select Page

ವಿಶ್ವಕಪ್ ಗೆದ್ದ ನಂತರ ಟಿ-ಟ್ವೆಂಟಿ‌ ಕ್ರಿಕೆಟ್ ಗೆ ವಿದಾಯ ಹೇಳಿದ ವಿರಾಟ್ & ರೋಹಿತ್

ವಿಶ್ವಕಪ್ ಗೆದ್ದ ನಂತರ ಟಿ-ಟ್ವೆಂಟಿ‌ ಕ್ರಿಕೆಟ್ ಗೆ ವಿದಾಯ ಹೇಳಿದ ವಿರಾಟ್ & ರೋಹಿತ್

ಬೆಂಗಳೂರು : ಟಿ-ಟ್ವೆಂಟಿ ವಿಶ್ವಕಪ್ ಗೆಲುವಿನ ನಂತರ ಭಾರತದ ಇಬ್ಬರು ಸ್ಟಾರ್ ಆಟಗಾರರು ಚುಟುಕು ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಕೊಂಚ ನೋವುಂಟು ಮಾಡಿದೆ.

ಕಳೆದ ಎರಡು ದಶಕಗಳಿಂದ ಭಾರತೀಯ ಕ್ರಿಕೆಟ್ ತಂಡದ ಬೆನ್ನೆಲುಬಾಗಿದ್ದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಮ್ಮ ಟಿ- ಟ್ವೆಂಟಿ ಆಟಕ್ಕೆ ವಿಧಾಯ ಘೋಷಣೆ ಮಾಡುವ ಮೂಲಕ ಹೊಸ ತಲೆಮಾರಿನ ಯುವಕರಿಗೆ ಅವಕಾಶ ಬಿಟ್ಡುಕೊಟ್ಟಿದ್ದಾರೆ. ವಿಶ್ವಕಪ್ ಗೆಲುವಿನ ಕನಸು ಹೊತ್ತಿದ್ದ ಈ ಇಬ್ಬರು ಆಟಗಾರರ ನಿರ್ಗಮನದಿಂದ ಚುಟುಕು ಕ್ರಿಕೆಟ್ ನಲ್ಲಿ ಇವರ ಆರ್ಭಟ ಕಾಣಸಿಗುವುದಿಲ್ಲ.

2007 ರಲ್ಲಿ ಟಿ – ಟ್ವೆಂಟಿ ಮೂಲಕ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ರೋಹಿತ್ ಶರ್ಮ ಚೊಚ್ಚಲ ಚುಟುಕು ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದರು. ದೋನಿ ನಾಯಕತ್ವದ ತಂಡದಲ್ಲಿ ಗೆದ್ದ ವಿಶ್ವಕಪ್ ತಂಡದಲ್ಲಿ ಯುವ ಆಟಗಾರರಾಗಿ ರೋಹಿತ್ ಎಲ್ಲರ ಗಮನ ಸೆಳೆದಿದ್ದರು.

ಈವರೆಗೆ ರೋಹಿತ್ ಶರ್ಮ ಈವರೆಗೆ 159 ಟಿ-20 ಪಂದ್ಯ ಆಡಿದ್ದು 4231 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 5 ಶತಕ ಹಾಗೂ 32 ಅರ್ಧಶತಕ ಸೇರಿವೆ. ಚುಟುಕು ಕ್ರಿಕೆಟ್ ನಲ್ಲಿ ಕಳೆದ 17 ವರ್ಷಗಳಿಂದ ಆಟವಾಡುತ್ತಿದ್ದು ಪ್ರಸ್ತುತ ಟಿ – 20 ಮಾದರಿ ಕ್ರಿಕೆಟ್ ನ ಭಾರತ ತಂಡದ ನಾಯಕನಾಗಿ ವಿಶ್ವಕಪ್ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಗೆಯೇ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್ ಗೆ ವಿದಾಯ ಹೇಳಿದ್ದು ಈವರೆಗೆ ಅಂತರಾಷ್ಟ್ರೀಯ ಟಿ20 ಯಲ್ಲಿ 125 ಪಂದ್ಯ ಆಡಿದ್ದಾರೆ. ಇದರಲ್ಲಿ 1 ಶತಕ ಹಾಗೂ 38 ಅರ್ಧಶತಕ ಗಳಿಸಿದ್ದು‌ 4188 ರನ್ ಕಲೆ ಹಾಕಿದ್ದಾರೆ. ಈ ಬಾರಿ ಭಾರತ ವಿಶ್ವಕಪ್ ಗೆಲ್ಲುವಲ್ಲಿ ವಿರಾಟ್ ಪಾತ್ರ ಬಹಳ ಮುಖ್ಯವಾಗಿತ್ತು.

ಇಬ್ಬರೂ ಆಟಗಾರರು ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿದ್ದರು ಭಾರತದ IPL ಪಂದ್ಯದಲ್ಲಿ ಇವರನ್ನು ಕಾಣಬಹುದು ಎಂಬುವುದೇ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ವಿಷಯ.

Advertisement

Leave a reply

Your email address will not be published. Required fields are marked *