ಬೆಳಗಾವಿ : ಬೆಳಗಾವಿಯ ಹಿಂಡಲಗಾ ಗ್ರಾಮದ ಲಕ್ಷ್ಮೀ ನಗರದ ಯುವಕ ಪ್ರಸಾದ ಮುಚ್ಚಂಡಿಕರ (28) ಶನಿವಾರ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾನೆ.
ಪ್ರಸಾದ ಕಳೆದ ಕೆಲದಿನಗಳಿಂದ ಡೆಂಗ್ಯು ರೋಗಕ್ಕೆ ತುತ್ತಾಗಿದ್ದರು. ಅವರಿಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮೃತರು ಅಜ್ಜಿ, ತಂದೆ, ಪತ್ನಿ, ಪುತ್ರನನ್ನು ಅಗಲಿದ್ದಾರೆ.