Select Page

ಜ.10ಕ್ಕೆ ಬೆಳಗಾವಿಗೆ ಶ್ರೀ ಅವಧೂತ ವಿನಯ್ ಗುರೂಜಿ ಆಗಮನ

ಜ.10ಕ್ಕೆ ಬೆಳಗಾವಿಗೆ ಶ್ರೀ ಅವಧೂತ ವಿನಯ್ ಗುರೂಜಿ ಆಗಮನ

ಬೆಳಗಾವಿ : ಚಿಕ್ಕಮಗಳೂರಿನ ಗೌರಿಗದ್ದೆ ಸ್ವರ್ಣ ಪೀಠಿಕಾಪುರ ಅವಧೂತ ಶ್ರೀ ವಿನಯ ಗುರೂಜಿ ಜ.10 ಶುಕ್ರವಾರ ಬೆಂಗಳೂರಿನಿಂದ ಬೆಳಗಾವಿಗೆ ಬೆಳಗ್ಗೆ 7.30ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸುವರು.

ಜ.10ಕ್ಕೆ 8.30ಕ್ಕೆ ಬೆಳಗಾವಿ ಹುಕ್ಕೇರಿ ಹಿರೇಮಠದ ಗುರುಶಾಂತೇಶ್ವರ ಸಂಸ್ಥಾನ ಮಠಕ್ಕೆ ಭೇಟಿ ನೀಡಲಿದ್ದಾರೆ. 10 ಗಂಟೆಗೆ ಹುಕ್ಕೇರಿ ಹಿರೇಮಠದ ಗುರುಕುಲದ ವೇದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

12 ಗಂಟೆಗೆ ಹುಕ್ಕೇರಿಯ ಮಹಾವೀರ ಶಿಕ್ಷಣ ಸಂಸ್ಥೆಗೆ ಭೇಟಿ ನೀಡುವರು. ಮಧ್ಯಾಹ್ನ 2 ಗಂಟೆಗೆ ಹುಕ್ಕೇರಿಯ ಸ್ವಾಮಿ‌ ವಿವೇಕಾನಂದ ಶಿಕ್ಷಣ ಸಂಸ್ಥೆಗೆ ಭೇಟಿ ನೀಡುವರು. ಸಂಜೆ 4ಕ್ಕೆ ಗುರುಶಾಂತೇಶ್ವರ ಪ್ರೌಢ ಶಾಲೆಯ ಆವರಣದಲ್ಲಿ ಜರುಗುವ 2025ನೇ ಹುಕ್ಕೇರಿಯ ಉತ್ಸವದಲ್ಲಿ ಭಾಗಿಯಾಗಿ ಸಾಧಕರಿಗೆ ಸನ್ಮಾನಿಸುವರು.

ಜ.11 ರಂದು ಬೆಳಗ್ಗೆ 9 ಗಂಟೆಗೆ ಅಥಣಿ ಶಿವಯೋಗಿಗಳು ಗದ್ದುಗೆ ದರ್ಶನ ಪಡೆಯಲಿದ್ದಾರೆ. ಬೆಳಗ್ಗೆ 10ಗಂಟೆಗೆ ಅಥಣಿ ಮೋಟಗಿಮಠದ ಶತಮಾನೋತ್ಸವದ ಭಾಗಿಯಾಗುವರು.

ಸಂಜೆ 6ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವರು. ಅರುಣಕುಮಾರ ಎಚ್.ಕೆ. ಟ್ರಸ್ಟಿ ಅವದೂತ ಶ್ರೀ ವಿನಯ ಗುರೂಜಿ ಗೌರಿಗದ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

Advertisement

Leave a reply

Your email address will not be published. Required fields are marked *

error: Content is protected !!