
ಬಾಗಪ್ಪ ಹರಿಜನ ಕೊಲೆ ಪ್ರಕರಣ ; ನಾಲ್ವರ ಬಂಧನ

ವಿಜಯಪುರ : ಕುಖ್ಯಾತ ರೌಡಿ ಬಾಗಪ್ಪ ಹರಿಜನ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರು ಪ್ರಕಾಶ್ ಮೇಲಿನಕೇರಿ, ರಾಹುಲ್ ತಳಕೇರಿ, ಸುದೀಪ್ ಕಾಂಬಳೆ ಹಾಗೂ ಮಣಿಕಂಠ ಬೆನಕೊಪ್ಪ. ಇದರಲ್ಲಿ ರಾಹುಲ್ ತಳಕೇರಿ ಹೊರತುಪಡಿಸಿ ಬಂಧಿತರಲ್ಲಿ ಯಾರೂ ಅಪರಾಧ ಹಿನ್ನಲೆ ಹೊಂದಿಲ್ಲ ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.
ಬಾಗಪ್ಪ ಹರಿಜನ ಕೊಲೆ ಪ್ರಕರಣಕ್ಕೆ ಮೂಲ ಕಾರಣ ರವಿ ಮೇಲಿನಕೇರಿ ಕೊಲೆ ಪ್ರಕರಣ ಎಂದು ಹೇಳಲಾಗುತ್ತಿದೆ. ಈ ಹಿಂದೆ ಆಸ್ತಿ ವಿಚಾರಕ್ಕೆ ಬಾಗಪ್ಪ ಕಡೆಯವರು ರವಿಯನ್ನು ಹತ್ಯೆ ಮಾಡಿದ್ದರು. ಈ ಸೇಡು ತೀರಿಸಿಕೊಳ್ಳಲು ರವಿ ಸಹೋದರ ಪ್ರಕಾಶ್ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.