ಸರ್ಕಾರಿ ಶಾಲಾ ಮಕ್ಕಳ ಜೊತೆ ಬಿಸಿಊಟ ಸವಿದ ನವಿಲು
ವಿಜಯಪುರ : ಸರ್ಕಾರಿ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ವಿಧ್ಯಾರ್ಥಿಗಳು ಮದ್ಯಾಹ್ನ ಬಿಸಿಯೂಟ ಸೇವಿಸುತ್ತಿರುವ ಸಮಯದಲ್ಲಿ ಹಾರಿ ಬಂದ ರಾಷ್ಟ್ರಪಕ್ಷಿ ನವಿಲು ಮಕ್ಕಳೊಂದಿಗೆ ಬಿಸಿಯೂಟ ಸವಿದು ಮಕ್ಕಳಿಗೆ ಮನೊಲ್ಲಾಸ ಹೆಚ್ಚಿಸಿದ ಘಟನೆ ಸೋಮವಾರ ನಡೆದಿದೆ.
ವಿಜಯಪುರ ತಾಲ್ಲೂಕಿನ ತಾಲ್ಲೂಕಿನ ಜಂಬಗಿ (ಆ) ಗ್ರಾಮದ ಕೆರೂರವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ವಸ್ತಿ ಶಾಲಾ ಮಕ್ಕಳು ಬಿಸಿಊಟ ಸೇವಿಸುವಾಗ ಹಾರಿ ಬಂದ ರಾಷ್ಟ್ರ ಪಕ್ಷಿ ಮಕ್ಕಳು ತಟ್ಟೆಯಲ್ಲಿ ಅನ್ನ ಹಾಕಿಕೊಂಡು ಪ್ರಾರ್ಥನೆ ಮಾಡುತ್ತಾ ಕುಳಿತಾಗ ಅನ್ನದ ತಟ್ಟೆಗೆ ಕಡೆಗೆ ಸಾಗಿದೆ.
ಈ ಸಮಯದಲ್ಲಿ ವಿಧ್ಯಾರ್ಥಿಯೋರ್ವಳು ತನ್ನ ತಟ್ಟೆಯನ್ನು ನವಿಲಿಗೆ ಕೊಟ್ಟು ಬೇರೊಂದು ತಟ್ಟೆ ತೆಗೆದುಕೊಂಡಿದ್ದಾಳೆ. ವರ್ಗಾಕೋಣೆಯ ಹತ್ತಿರವು ಬಂದ ನಾಟ್ಯ ಮಯೂರಿ ಧಾನ್ಯಗಳನ್ನು ಸವಿದು ತನ್ನಹಸಿವನ್ನು ನಿಗಿಸಿಕೊಂಡಿದೆ.
ಶಾಲಾ ಆವರಣವು ಹಚ್ಚ ಹಸಿರಿನ ಗಿಡಗಳ ಮಧ್ಯೆ ಸುಂದರ ಪ್ರಕೃತಿ ಸೌಂದರ್ಯ ಹೊಂದಿದ್ದು, ಪ್ರತಿದಿನ ಮಕ್ಕಳು ಈ ಪ್ರಕೃತಿ ಮಡಿಲಲ್ಲಿ ಊಟ ಸೇಸುತ್ತಾರೆ. ಹಸಿರು ತುಂಬಿದ ವಾತಾವರಣದಲ್ಲಿ ರಾಷ್ಟ್ರಪಕ್ಷಿ ಆಗಮಿಸಿದ್ದರಿಂದ ವಿಧ್ಯಾರ್ಥಿಗಳು ಖುಷ್ ಆಗಿದ್ದಾರೆ.
ಈ ಸಂದರ್ಭದಲ್ಲಿ ಊಟ ಸವಿಯುತ್ತಾ ಮುಖ್ಯೋಪಾಧ್ಯಾಯ ಪಿ.ಪಿ.ನಾಯಿಕ, ಸಹಶಿಕ್ಷಕಿ ಎನ್.ವೈ.ರಾಠೋಡ ಮಕ್ಕಳಿಗೆ ರಾಷ್ಟ್ರಪಕ್ಷಿಯ ಕುರಿತು ಸಂಪೂರ್ಣ ವಿವರ ನೀಡಿ ಮಕ್ಕಳಿಗೆ ಪಕ್ಷಿ ಹಾಗೂ ಪ್ರಾಣಿ ಪ್ರೀಯತೆಯನ್ನು ಹೆಚ್ಚಿಸಿದ್ದಾರೆ.