Select Page

24 ನೇ ವಯಸ್ಸಿಗೆ ಕಿರಿಯ ಸಿವಿಲ್ ನ್ಯಾಯಾದೀಶೆಯಾದ ನಮೃತ ಹೊಸಮಠ

24 ನೇ ವಯಸ್ಸಿಗೆ ಕಿರಿಯ ಸಿವಿಲ್ ನ್ಯಾಯಾದೀಶೆಯಾದ ನಮೃತ ಹೊಸಮಠ

ಬೆಂಗಳೂರು : ಸಾಧನೆಗೆ ವಯಸ್ಸು, ಲಿಂಗ, ಜಾತಿ ಎಂಬುದರ ಯಾವುದೇ ತೊಡಕಿಲ್ಲ. ಮನುಷ್ಯ ಮನಸ್ಸು ಮಾಡಿದರೆ ಯಾವುದನ್ನೇ ಆದರು ಸಾಧಿಸುವ ಶಕ್ತಿ ಹೊಂದಿದ್ದಾನೆ ಎಂಬುದಕ್ಕೆ ಈ ಯುವತಿಯ ಕಥೆ ಅದೆಷ್ಟೋ ಯುವಕರಿಗೆ ಸ್ಪೂರ್ತಿ ಆಗುವುದರಲ್ಲಿ ಎರಡು ಮಾತಿಲ್ಲ.

ಕೇವಲ ತನ್ನ 24ನೇ ವಯಸ್ಸಿಗೆ ಕರ್ನಾಟಕದ ಅತ್ಯಂತ ಕಿರಿಯ ಸಿವಿಲ್ ನ್ಯಾಯಾಧೀಶೆಯಾಗಿ ನಮೃತ ಎಸ್‌. ಹೊಸಮಠ ( Namrata S Hosamath )ಅವರು ನೇಮಗೊಂಡಿದ್ದಾರೆ. ರಾಜ್ಯದ ನೂತನ ಸಿವಿಲ್‌ ನ್ಯಾಯಾಧೀಶರಾಗಿ 33 ಯುವ ವಕೀಲರು ಆಯ್ಕೆಯಾಗಿದ್ದಾರೆ.
ಇದರಲ್ಲಿ ನಮೃತ ಕೇವಲ 24 ವಯಸ್ಸಿನ ಯುವತಿ.

ರಾಜ್ಯದ ಅತ್ಯಂತ ಕಿರಿಯ ನ್ಯಾಯಾಧೀಶೆಯಾಗಿ ಬೆಂಗಳೂರು ಉತ್ತರದ ಸುಬ್ರಹ್ಮಣ್ಯನಗರ ಶ್ರೀರಾಮಪುರಂ ನ 24 ವರ್ಷದ ನಮ್ರತಾ ಎಸ್.‌ ಹೊಸಮಠ್‌ ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಮೂಲಕ ನಮ್ರತಾ ಎಸ್.‌ ಹೊಸಮಠ್‌ ರಾಜ್ಯದ ಅತ್ಯಂತ ಕಿರಿಯ ನ್ಯಾಯಾಧೀಶೆ ಎನ್ನಲಾಗಿದೆ.

ನಮ್ರತಾ ಎಸ್.‌ ಹೊಸಮಠ್‌ ಅವರು ತಮ್ಮ ಎಸ್ಎಸ್ಎಲ್ಸಿ ಶಿಕ್ಷಣವನ್ನು ಶ್ರೀ ವಿದ್ಯಾ ಮಂದಿರ ಎಜುಕೇಶನ್ ಸೊಸೈಟಿ, ಮಲ್ಲೇಶ್ವರಂ, ಬೆಂಗಳೂರು ಇಲ್ಲಿ ಪೂರ್ಣ ಗೊಳಿಸಿದ್ದಾರೆ. ಬಳಿಕ, ಪಿಯುಸಿ (PCMB ) ಕೋರ್ಸ್ ಶ್ರೀ ವಿದ್ಯಾ ಮಂದಿರ ಎಜುಕೇಶನ್ ಸೊಸೈಟಿ, ನಂತರ ಬಿ.ಎ.ಎಲ್.ಎಲ್.ಬಿ. ವಿಶ್ವವಿದ್ಯಾಲಯ ಕಾನೂನು ಕಾಲೇಜು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿದರು.

ಪ್ರಸ್ತುತ ಗೌರವಾನ್ವಿತ ನ್ಯಾಯಮೂರ್ತಿ ಡಾ.ಎಚ್.ಬಿ.ಪ್ರಭಾಕರ ಶಾಸ್ತ್ರಿ ಅವರ ಅಡಿಯಲ್ಲಿ ಕರ್ನಾಟಕ ಹೈಕೋರ್ಟ್ನಲ್ಲಿ ಕಾನೂನು ಗುಮಾಸ್ತ ಮತ್ತು ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

24ನೇ ವಯಸ್ಸಿನಲ್ಲಿ ಪ್ರಥಮ ಪ್ರಯತ್ನದಲ್ಲಿ ಕರ್ನಾಟಕ ಸಿವಿಲ್ ನ್ಯಾಯಾಧೀಶೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ನಮೃತ ಅವರ ಯಶಸ್ಸು, ಪರಿಶ್ರಮ ಅವರ ವೃತ್ತಿಯ ಮೇಲಿನ ಉತ್ಸಾಹಕ್ಕೆ ಸಾಕ್ಷಿಯಾಗಿದೆ.

ಈ ಹಿಂದೆ 25ನೇ ವಯಸ್ಸಿನ ಅನಿಲ್ ಜಾನ್ ಸಿಕ್ವೇರಾ ಅವರು  ಕರ್ನಾಟಕದ ಅತ್ಯಂತ ಕಿರಿಯ ಸಿವಿಲ್ ನ್ಯಾಯಾಧೀಶರಾಗಿ ನೇಮಕೊಂಡಿರುವುದಾಗಿ ವರದಿಯಾಗಿತ್ತು.  ಆದರೆ 24 ನೇ ವಯಸ್ಸಿಗೆ ಕರ್ನಾಟಕದ ಅತೀ ಕಿರಿಯ ಸಿವಿಲ್ ನ್ಯಾಯಾಧೀಶೆಯಾಗಿ ನಮೃತ ಎಸ್‌. ಹೊಸಮಠ ಅವರು ಸಾಧನೆಗೈದಿರುವುದು ತಿಳಿದುಬಂದಿದೆ.

Advertisement

Leave a reply

Your email address will not be published. Required fields are marked *