Select Page

ಅರಳಿ ಎಲೆಯಲ್ಲಿ ಅರಳಿತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭಾವಚಿತ್ರ

ಅರಳಿ ಎಲೆಯಲ್ಲಿ ಅರಳಿತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭಾವಚಿತ್ರ

ಬೆಳಗಾವಿ : ಸಾಮಾನ್ಯವಾಗಿ ಚಿತ್ರನಟರು ಹಾಗೂ ಕ್ರೀಡಾಪಟುಗಳಿಗಾಗಿ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ತಮ್ಮ ಅಭಿಮಾನ ಸಮರ್ಪಣೆ ಮಾಡುವುದನ್ನು ಕಾಣಬಹುದು. ಆದರೆ ಒಬ್ಬ ಸರ್ಕಾರಿ‌ ಅಧಿಕಾರಿಯ ಕಾರ್ಯವೈಖರಿ ಮೆಚ್ಚಿ ಅವರಿಗೆ ಅಭಿಮಾನ ತೋರಿಸುವುದು ಅಪರೂಪ.

ಸಧ್ಯ ಬೆಳಗಾವಿ ಜಿಲ್ಲಾಧಿಕಾರಿ ಆಗಿರುವ ಮೊಹಮ್ಮದ್ ರೋಷನ್ ಅವರು ಈ ಹಿಂದೆ ಹಾವೇರಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದರು. ಇವರ ಕಾರ್ಯವೈಖರಿ ಮೆಚ್ಚಿ ಅಭಿಮಾನಿ ಒಬ್ಬರು ಅರಳಿ ಎಲೆಯಲ್ಲಿ ಜಿಲ್ಲಾಧಿಕಾರಿಗಳ ಭಾವಚಿತ್ರ ಬಿಡಿಸಿ ಅಭಿಮಾನ ಮೆರೆದಿದ್ದಾರೆ.‌

ಸವಣೂರು ತಾಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದ ಮಂಜುನಾಥ ಮಗದೂರ ಎಂಬುವವರು ಈ ಚಿತ್ರ ಬಿಡಿಸಿದ್ದು, ಜಿಲ್ಲಾಧಿಕಾರಿ ಅವರಿಗೆ ನನ್ನ ಪುಟ್ಟ ಉಡುಗೊರೆ ಎನ್ನುತ್ತಾರೆ ಅಭಿಮಾನಿ.

Advertisement

Leave a reply

Your email address will not be published. Required fields are marked *

error: Content is protected !!