
ಸುರಂಗ ಕುಸಿತಕ್ಕೆ ಕಾರಣವಾಯ್ತಾ ಬಾಬಾ ಬೌಖನಾಗ್ ದೇವಸ್ಥಾನ ನೆಲಸಮ ; ರೋಚಕ ಸಂಗತಿ ಏನದು..?

ಉತ್ತರಕಾಶಿ : ಕಳೆದ 17 ದಿನಗಳಿಂದ ಇಡೀ ದೇಶವನ್ನೇ ತುದಿಗಾಲಿನ ಮೇಲೆ ನಿಲ್ಲಿಸಿದ್ದ ಸುರಂಗ ಕುಸಿತದ ಸಂಗತಿ ಕೊನೆಗೂ ಯಶಸ್ವಿಯಾಗಿ ಕಾರ್ಯಾಚರಣೆ ಮುಗಿದಿದೆ. ಆದರೆ ಸುರಂಗ ಕುಸಿತದ ಹಿಂದಿನ ರೋಚಕ ಕಥೆಗಳು ಸಧ್ಯ ಹೊರಬರುತ್ತಿವೆ.
ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಆಸ್ಟ್ರೇಲಿಯಾ ಮೂಲದ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರು ಪುಟ್ಟ ದೇವಸ್ಥಾನದ ಮುಂದೆ ಕೈ ಮುಗಿದ ದೃಶ್ಯ ಹಾಗೂ ಪೋಟೋ ವೈರಲ್ ಆಗಿತ್ತು. ವಿಜ್ಞಾನದ ಜೊತೆ ಸದಾಕಾಲವೂ ಧಾರ್ಮಿಕ ಭಾವನೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇದೇ ಸಾಕ್ಷಿ.
ನವೆಂಬರ್ 12 ರಂದು ಇಡೀ ದೇಶ ದೀಪಾವಳಿ ಆಚರಣೆ ಮಾಡುತ್ತಿದ್ದರೆ ಅತ್ತ ಉತ್ತರಕಾಶಿಯ ಸಿಲ್ಕ್ಯಾರಾ ಬಳಿ ಸುರಂಗ ಮಾರ್ಗ ಕುಸಿದು 41 ಕಾರ್ಮಿಕರು ಸಿಲುಕಿದ್ದ ಘಟನೆ ನಡೆದಿತ್ತು. ನಂತರ ಸತತವಾಗಿ 17 ದಿನಗಳ ಕಾರ್ಯಾಚರಣೆ ನಂತರ ಎಲ್ಲರನ್ನೂ ಸುರಕ್ಷಿತವಾಗಿ ಹೊರತರಲಾಗಿದೆ.
ಬಾಬಾ ಬೌಖನಾಗ್ ಶಾಪ
ಉತ್ತರಕಾಶಿಯ ( utarakashi ) ಸಿಲ್ಕ್ಯಾರಾ ಬಳಿ ಸುರಂಗ ಮಾರ್ಗ ಕೊರೆಯುವ ಕಾಮಗಾರಿ ಪ್ರಾರಂಭಿಸಿದ್ದ ಸಂದರ್ಭದಲ್ಲಿ ಅಲ್ಲೇ ಇದ್ದ ಬಾಬಾ ಬೌಖನಾಗ್ ( baba bauknag ) ದೇವಾಲಯ ನೆಲಸಮ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸ್ಥಳೀಯರ ಬಾರಿ ವಿರೋಧ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ನವೆಂಬರ್ 12 ರಂದು ಸುರಂಗ ಕುಸಿತ ಉಂಟಾಗಿ 41 ಕರ್ಮಿಕರು ಸಿಲುಕಿದ ಸಂದರ್ಭದಲ್ಲಿ ಬಾಬಾನ ಶಾಪವೇ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದರು
ಇದರಿಂದ ಎಚ್ಚೆತ್ತುಕೊಂಡ ಸ್ಥಳೀಯ ಆಡಳಿತ ಬಾಬಾ ಬೌಖನಾಗ್ ಪುಟ್ಟ ಮಂದಿರ ಸ್ಥಾಪಿಸಿತ್ತು. ಈ ಸಂದರ್ಭದಲ್ಲಿ ಸ್ಥಳೀಯರು ಮಂದಿರದಲ್ಲಿ ಜನರ ರಕ್ಷಣೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ರಕ್ಷಣಾ ಕಾರ್ಯಾಚರಣೆಗೆ ಬಂದಿದ್ದ ಅಂತರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಪ್ರತಿದಿನ ಬಾಬಾನಿಗೆ ನಮಸ್ಕರಿಸಿ ಕೆಲಸ ಪ್ರಾರಂಭಿಸುತ್ತಿದ್ದರು.
ಮಂಗಳವಾರ ನವೆಂಬರ್ 28 ರಂದು ಕಾರ್ಯಾಚರಣೆ ಪೂರ್ಣಗೊಳ್ಳುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರವು ಬಾಬಾ ಬೌಖನಾಗ್ ಮಂದಿರದಲ್ಲಿ ನಮಿಸಿದ್ದು ವಿಶೇಷವಾಗಿತ್ತು. ( #UttarakhandTunnelRescue )