
ಇದೇ ವಾರದಲ್ಲಿ SSLC ಫಲಿತಾಂಶ ; ವಿಳಂಬಕ್ಕೆ ಏನು ಕಾರಣ?

ಬೆಂಗಳೂರು : SSLC ಫಲಿತಾಂಶಕ್ಕಾಗಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಇಂದು ಫಲಿತಾಂಶ ಬರುತ್ತದೆ ನಾಳೆ ಬರುತ್ತದೆ ಎಂದು ಕಾಯ್ದವರಿಗೆ ಇದೇ ವಾರದಲ್ಲಿ ಫಲಿತಾಂಶ ಬಿಡುವ ಸಾಧ್ಯತೆ ಇದೆ.
ಹೌದು SSLC ಫಲಿತಾಂಶ ವಿಳಂಬ ಆಗಲು ಪ್ರಮುಖ ಕಾರಣ ರಾಜ್ಯ ಚುನಾವಣಾ ಪ್ರಕ್ರಿಯೆ. ಈ ಕಾರಣದಿಂದ ಕೆಲ ದಿನಗಳಿಂದ ಫಲಿತಾಂಶ ಯಾವಾಗ ಎಂಬ ಗೊಂದಲ ಮೂಡಿದೆ. ಹಾಗಂತ ಈವರೆಗೂ ಶಿಕ್ಷಣ ಇಲಾಖೆ ಫಲಿತಾಂಶದ ದಿನಾಂಕದ ಕುರಿತು ಮಾಹಿತಿ ನೀಡದಿದ್ದರು, ಅಲ್ಲಲ್ಲಿ ಸುಳ್ಳು ಸುದ್ದಿಗಳು ಹಬ್ಬುತ್ತಿರುವುದು ಸಾಮಾನ್ಯವಾಗಿದೆ.
ಈಗಾಗಲೇ ರಾಜ್ಯ ಚುನಾವಣಾ ಪ್ರಕ್ರಿಯೆ ಕೊನೆಯ ಘಟ್ಟ ತಕುಪಿದ್ದು ಇದೇ ವರುವ ಮೇ 10 ರಂದು ಮತದಾನ ನಡೆಯಲಿದೆ. ಈ ಮಧ್ಯದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದ್ದು ಯಾರೂ ಗೊಂದಲ ಮೂಡಿಸಿಕೊಳ್ಳಬಾರದು.
2023 ರ SSLC – Result ನೋಡುವ ಕುರಿತು ತಮ್ಮ ಮಾಹಿಯಿ ಕೊಡಲಾಗುತ್ತದೆ. ಈ ಮಾಹಿತಿ ಆಧಾರಿಸಿ ತಾವು ತಮ್ಮ ಮನೆಯಲ್ಲಿ ಕುಳಿತುಕೊಂಡು ಫಲಿತಾಂಶ ನೋಡಬಹುದಾಗಿದೆ.
ಫಲಿತಾಂಶ ನೋಡಲು ಈ ಕೆಳಗಿನ ಲಿಂಕ್ ಒತ್ತಿ
karresults.nic.in
http://SSLC ಫಲಿತಾಂಶ ಇಲ್ಲಿ ನೋಡಿ….! kseab.karnataka.gov.in.
ಕರ್ನಾಟಕ ಎಸ್‌ಎಸ್‌ಎಲ್‌ಸಿ 2023 ರ ಮೌಲ್ಯ ಮಾಪನವು ಪೂರ್ಣಗೊಂಡಿದ್ದು ಅತಿ ಶೀಘ್ರದಲ್ಲಿ ಫಲಿತಾಂಶ ಹೊರಬೀಳಲಿದೆ ಎಂದು ವರದಿಯಾಗಿದೆ ಮತ್ತು ಈ ಪ್ರಕ್ರಿಯೆಗೆ ಮಂಡಳಿಯು ಉಪ ಮುಖ್ಯ ಮೌಲ್ಯಮಾಪಕರು ಮತ್ತು ಸಹ ಮೌಲ್ಯಮಾಪಕರನ್ನು ನೇಮಿಸಿದೆ. 2023 ಕರ್ನಾಟಕ SSLC ಬೋರ್ಡ್ ಪರೀಕ್ಷೆಯಲ್ಲಿ ಒಟ್ಟು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು.
ಫಲಿತಾಂಶ ನೋಡುವುದು ಹೇಗೆ…?
ಅಧಿಕೃತ ವೆಬ್‌ಸೈಟ್- karresults.nic.in ಗೆ ಹೋಗಿ
ಕಾಣಿಸಿಕೊಂಡ ಮುಖಪುಟದಲ್ಲಿ, ಕರ್ನಾಟಕ SSLC 2023 ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ
ಹೊಸ ಲಾಗಿನ್ ಪುಟ ತೆರೆಯುತ್ತದೆ.
ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ವಿವರಗಳನ್ನು ಸಲ್ಲಿಸಿ
ಫಲಿತಾಂಶವನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿ
ಭವಿಷ್ಯದ ಉಲ್ಲೇಖಗಳ ಪ್ರಿಂಟ್ ಔಟ್ ತೆಗೆದುಕೊಳ್ಳಿ