Select Page

ಬೆಳಗಾವಿಯಲ್ಲಿ ಸಧ್ಯದ ಚುನಾವಣಾ ಟ್ರೆಂಡ್ ಹೇಗಿದೆ ; ಯಾವ ಪಕ್ಷದ ಅಭ್ಯರ್ಥಿ ಮುಂದೆ?

ಬೆಳಗಾವಿಯಲ್ಲಿ ಸಧ್ಯದ ಚುನಾವಣಾ ಟ್ರೆಂಡ್ ಹೇಗಿದೆ ; ಯಾವ ಪಕ್ಷದ ಅಭ್ಯರ್ಥಿ ಮುಂದೆ?

ಬೆಳಗಾವಿ : ತೀವ್ರ ಕುತೂಹಲ ಮೂಡಿಸಿರುವ ರಾಜ್ಯ ವಿಧಾನಸಭಾ ಚುನಾವಣೆ ಮತದಾನ ದಿನ ಸಮೀಪವಾಗುತ್ತಿದ್ದು ಸೋಲು ಗೆಲುವಿನ ಲೆಕ್ಕಾಚಾರ ಮುಂದುವರಿದಿದೆ. ಈ ಮಧ್ಯೆ ಸದ್ಯದ ಟ್ರೆಂಡ್ ಏನಿದೆ ಎಂಬುದರ ಲೆಕ್ಕಾಚಾರ ನಿಮ್ಮ ಮುಂದೆ.‌

ಬೆಳಗಾವಿ ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿದ್ದು ಒಂದೆರಡು ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಸಧ್ಯದ ಟ್ರೆಂಡ್ ಪ್ರಕಾರ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಮುಂದಿದೆ ಎಂದು ಹೇಳಬಹುದು.

ಅಥಣಿ : ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಸಧ್ಯ ಬಿಜೆಪಿಯಿಂದ ಮಹೇಶ್ ಕುಮಠಳ್ಳಿ ಸ್ಪರ್ಧಿಸಿದರೆ ಕಾಂಗ್ರೆಸ್ ನಿಂದ ಲಕ್ಷಣ ಸವದಿ ನಿಂತಿದ್ದಾರೆ. ಈಗಾಗಲೇ ಈ ಇಬ್ಬರ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ಸೇರ್ಪಡೆಯಾದ ಲಕ್ಷ್ಮಣ ಸವದಿ ಜೊತೆ ಹಳೆ ಬಿಜೆಪಿ ಕಾರ್ಯಕರ್ತರ ಪಡೆ ಸೇರ್ಪಡೆಯಾಗಿದ್ದು ಉತ್ಸಾಹ ಎದ್ದು ಕಾಣುತ್ತಿದೆ. ಇನ್ನೂ ಬಿಜೆಪಿ ಉಳಿದ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದು ಲಕ್ಷ್ಮಣ ಸವದಿಗೆ ಟಕ್ಕರ್ ಕೊಡಲು ಮುಂದಾಗಿದೆ.

ಸಧ್ಯ ಕಾಂಗ್ರೆಸ್ ಪಕ್ಷದ ಲಕ್ಷ್ಮಣ ಸವದಿ ಪರವಾದ ಅಲೆ ಹೆಚ್ಚಾಗಿದ್ದು ಇದೇ ಟ್ರೆಂಡ್ ಮುಂದುವರಿದರೆ ಸವದಿ ಗೆಲ್ಲುವುದು ಅನುಮಾನ ಇಲ್ಲ. ಆದರೆ ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ರಣತಂತ್ರ ಹೆಣೆಯುತ್ತಿದ್ದು ಫಲಿತಾಂಶ ಏನಾದರು ಆಗಬಹುದು. ಜೊತೆಗೆ ಪಂಚಮಸಾಲಿ ಮತ ನಿರ್ಣಾಯಕ ಪಾತ್ರ ವಹಿಸಿದ್ದು, ಅವರ ನಿರ್ಧಾರ ಕೂಡಾ ಪರಿಣಾಮ ಬೀರಬಹುದು.

ಮುನ್ನಡೆ – ಲಕ್ಷಣ ಸವದಿ

ಪೈಪೋಟಿ – ಮಹೇಶ್ ಕುಮಠಳ್ಳಿ

********************

ಬೆಳಗಾವಿ ಗ್ರಾಮೀಣ : ತೀವ್ರ ಕುತೂಹಲ ಮೂಡಿಸಿರುವ ಬೆಳಗಾವಿ ಗ್ರಾಮೀಣದಲ್ಲಿ ಕಾಂಗ್ರೆಸ್ ನಿಂದ ಲಕ್ಷೀ ಹೆಬ್ಬಾಳ್ಕರ್ ಇದ್ದು ಬಿಜೆಯಿಯಿಂದ ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳಕರ್ ಅವರಿದ್ದಾರೆ. ಸಧ್ಯ ಇಬ್ಬರು ಭರ್ಜರಿ ಪ್ರಚಾರ ಕೈಗೊಂಡಿದ್ದು ಮರಾಠಾ ಸಮುದಾಯದ ಮತ ಇಲ್ಲಿ ನಿರ್ಣಾಯಕ. ಸಧ್ಯ ಕ್ಷೇತ್ರದ ಮೇಲೆ ಹಿಡಿತ ಹೊಂದಿರುವ ಲಕ್ಷ್ಮೀ ಹೆಬ್ಬಾಳ್ಕರ್ ಮುನ್ನಡೆ ಕಾಯ್ದುಕೊಂಡಿದ್ದು ಇವರ ಪರ ಜನರ ಅಲೆ ಹೆಚ್ಚಿದೆ. ಇನ್ನೂ ಕೊನೆ ಕ್ಷಣದಲ್ಲಿ ಕ್ಷಣದಲ್ಲಿ ಸಾಹುಕಾರ್ ತಂತ್ರ ಕೂಡಾ ಪರಿಣಾಮ ಬೀರುವುದರಲ್ಲಿ ಅನುಮಾನ ಇಲ್ಲ.

ಮುನ್ನಡೆ – ( ಗೆಲ್ಲುವ ಸಂಭವ ಹೆಚ್ಚು ) – ಲಕ್ಷ್ಮೀ ಹೆಬ್ಬಾಳ್ಕರ್

ಪೈಪೋಟಿ – ನಾಗೇಶ್ ಮನ್ನೋಳಕರ್ ( ಬಿಜೆಪಿ )

**********************

ಗೋಕಾಕ್ : ನಿರಂತರ ಗೆಲುವಿನ ಮೂಲಕ ಕ್ಷೇತದ ಮೇಲೆ ಉತ್ತಮ ಒಡನಾಟ ಹೊಂದಿರುವ ರಮೇಶ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ. ಇನ್ನೂ ಕಾಂಗ್ರೆಸ್ ನಿಂದ ಪಂಚಮಸಾಲಿ ಸಮುದಾಯದ ಮುಖಂಡ ಮಹಾಂತೇಶ್ ಕಡಾಡಿ ಸ್ಪರ್ಧಿಸಿದ್ದು ಪೈಪೋಟಿ ನೀಡುತ್ತಿದ್ದಾರೆ. ಸಧ್ಯ ಪಂಚಮಸಾಲಿ ಮತ ಕಡಾಡಿ ಬೆನ್ನಿಗೆ ನಿಂತಿದ್ದು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಸಧ್ಯದ ಟ್ರೆಂಡ್ ಪ್ರಕಾರ ರಮೇಶ್ ಜಾರಕಿಹೊಳಿ ಮುಂದಿದ್ದಾರೆ.

ಮುನ್ನಡೆ – ( ಗೆಲುವಿನ ಸಂಭವ ) – ರಮೇಶ್ ಜಾರಕಿಹೊಳಿ

ಪೈಪೋಟಿ – ಡಾ. ಮಹಾಂತೇಶ್ ಕಡಾಡಿ ( ಕಾಂಗ್ರೆಸ್ )

**********************

ರಾಮದುರ್ಗ : ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಸಿಟ್ಟಾದ ಪ್ರಭಲ ವೀರಶೈವ ಲಿಂಗಾಯತ ಸಮುದಾಯ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಪಟ್ಟಣ ಪರ ನಿಲ್ಲುವ ಸಾಧ್ಯತೆ ಹೆಚ್ಚಾಗಿದೆ. ಜಿತೆಗೆ ಸ್ಥಳೀಯ ಅಭ್ಯರ್ಥಿ ಎಂಬ ಅನುಕಂಪ ಇವರ ಮೇಲಿದ್ದು ಹೆಚ್ಚಿನ ಮುನ್ನಡೆ ಸಾಧಿಸಿದ್ದಾರೆ‌. ಇನ್ನೂ ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಪೈಪೋಟಿ ಕೊಡುತ್ತಿದ್ದು ಕಾರ್ಯಕರ್ತರ ಅಸಮಾಧಾನ ಸರಿ ಮಾಡಲು ಎಡವುತಿದ್ದಾರೆ.

ಮುನ್ನಡೆ – ( ಗೆಲ್ಲುವ ಸಂಭವ ) ಅಶೋಕ್ ಪಟ್ಟಣ ( ಕಾಂಗ್ರೆಸ್ )

ಪೈಪೋಟಿ – ಚಿಕ್ಕರೇವಣ್ಣ ( ಬಿಜೆಪಿ )

******************

ಬೈಲಹೊಂಗಲ : ಮಾಜಿ ಶಾಸಕ ಜಗದೀಶ್ ಮೆಟಗುಡ ಈ ಬಾರಿ ಬಿಜೆಪಿ ಅಭ್ಯರ್ಥಿ. ಹಾಲಿ ಶಾಸಕ ಮಹಾಂತೇಶ್ ಕೌಜಲಗಿ ಕಾಂಗ್ರೆಸ್ ಅಭ್ಯರ್ಥಿ. ಇನ್ನೂ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಪಕ್ಷೇತರ ಅಭ್ಯರ್ಥಿ. ಆದರೆ ಸಧ್ಯ ಜಗದೀಶ್ ಮೆಟಗುಡ ಪರವಾದ ಅಲೆ ಜೋರಾಗಿದೆ. ನರೇಂದ್ರ ಮೋದಿ ಬೈಲಹೊಂಗಲ ಭೇಟಿ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಪಕ್ಷೇತರ ಅಭ್ಯರ್ಥಿ ಕೂಡಾ ಟಕ್ಕರ್ ನೀಡುತ್ತಿದ್ದಾರೆ.

ಮುನ್ನಡೆ – ( ಗೆಲುವಿನ ಸಂಭವ ) ಜಗದೀಶ ಮೆಟಗುಡ – ಬಿಜೆಪಿ

ಪೈಪೋಟಿ – ಮಹಾಂತೇಶ್ ಕೌಜಲಗಿ – ಕಾಂಗ್ರೆಸ್

********************

ಕಾಗವಾಡ‌ : ಬಿಜೆಪಿ ಹಾಲಿ ಶಾಸಕ ಶ್ರೀಮಂತ ಪಾಟೀಲ್ ಹಾಗೂ ಕಾಂಗ್ರೆಸ್ ನಿಂದ ರಾಜು ಕಾಗೆ ಸ್ಪರ್ಧೆ ಮಾಡಿದ್ದು ಇಬ್ಬರ ಮಧ್ಯೆ ಪೈಪೋಟಿ ಇದೆ‌. ಆದರೆ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಪರ ಒಲವು ಜಾಸ್ತಿ ಇದ್ದು ಸಧ್ಯ ಅವರೇ ಮುಂದೆ ಸಾಗುತ್ತಿದ್ದಾರೆ. ಇನ್ನೂ ಕಾಂಗ್ರೆಸ್ ಪೈಪೋಟಿ ನೀಡುತ್ತಿದ್ದರು ಕೊನೆ ಕ್ಷಣದ ಹೋರಾಟ ಯಾರಿಗಾದರೂ ಲಾಭ ಕೊಡಬಹುದು.

ಮುನ್ನಡೆ – ಶ್ರೀಮಂತ ಪಾಟೀಲ್ – ಬಿಜೆಪಿ

ಪೈಪೋಟಿ – ರಾಜು ಕಾಗೆ – ಕಾಂಗ್ರೆಸ್

********************

ಕುಡಚಿ : ಕಳೆದ ಎರಡು ಬಾರಿ ಶಾಸಕರಾಗಿರುವ ಪಿ. ರಾಜೀವ್ ಹಾಗೂ ಕಾಂಗ್ರೆಸ್ ನಿಂದ ಮಹೇಂದ್ರ ತಮ್ಮಣ್ಣವರ ನಡುವೆ ಸ್ಪರ್ಧೆ ಏರ್ಪಟ್ಟಿದ್ದು ರಾಜೀವ್ ಪರ ಅಲೆ ಹೆಚ್ಚಾಗಿದೆ. ಇನ್ನೂ ನರೇಂದ್ರ ‌ಮೋದಿ‌ ಕಾರ್ಯಕ್ರಮ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದ್ದು, ಶಾಸಕ ಪಿ. ರಾಜೀವ್ ಮುನ್ನಡೆ ಸಾಧಿಸುವ ಸಂಭವ ಹೆಚ್ಚಾಗಿದೆ.

ಮುನ್ನಡೆ – ಪಿ. ರಾಜೀವ್ – ಬಿಜೆಪಿ

ಪೈಪೋಟಿ – ಮಹೇಂದ್ರ ತಮ್ಮಣ್ಣವರ – ಕಾಂಗ್ರೆಸ್

*********************

ರಾಯಬಾಗ : ಬಿಜೆಪಿ, ಜೇಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಇದ್ದು ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಮಧ್ಯೆ ಹೋರಾಟ ದಟ್ಟವಾಗಿದೆ. ಬಿಜೆಪಿ ಯಿಂದ ಹಾಲಿ ಶಾಸಕ ದುರ್ಯೋಧನ ಐಹೊಳೆ ಹಾಗೂ ಜೆಡಿಎಸ್ ನಿಂದ ಪ್ರದೀಪ ಕುಮಾರ ಮಾಳಗಿ ಪರ ಜನರ ಒಲವು ಹೆಚ್ಚಾಗಿದೆ. ಸಧ್ಯ ಇರುವ ಟ್ರೆಂಡ್ ಮುಂದುವರಿದರೆ ಬಿಜೆಪಿ ಗೆಲುವಿನ ಸಾಧ್ಯತೆ ದಟ್ಟವಾಗಿದೆ.

ಮುನ್ನಡೆ – ದುರ್ಯೋಧನ ಐಹೊಳೆ ( ಬಿಜೆಪಿ )

ಪೈಪೋಟಿ – ಪ್ರದೀಪಕುಮಾರ ಮಾಳಗಿ ( ಜೆಡಿಎಸ್)

******************

ಹುಕ್ಕೇರಿ : ದಿ. ಉಮೇಶ್ ಕತ್ತಿ ಪ್ರತಿನಿಧಿಸುತ್ತಿರುವ ಕ್ಷೇತ್ರ ಹುಕ್ಕೇರಿ. ಸಧ್ಯ ಬಿಜೆಪಿಯಿಂದ ನಿಖಿಲ್ ಕತ್ತಿ ಉದ್ದು ಕಾಂಗ್ರೆಸ್ ನಿಂದ ಎ.ಬಿ ಪಾಟೀಲ್ ಇದ್ದಾರೆ. ಪಂಚಮಸಾಲಿ ಮತ ಈ ಬಾರಿ ಬಿಜೆಪಿಗೆ ಕೈ ಕೊಡುವ ಸಧ್ಯತೆ ಇದ್ದರು ಬಿಜೆಪಿ ಪರವಾದ ಅಲೆ ಜೋರಾಗಿದೆ. ಹಾಗಾಗಿ ಸಧ್ಯ ನಿಖಿಲ್ ಕತ್ತಿ ಮುನ್ನಡೆ ಸಾಧಿಸಿದ್ದಾರೆ.

ಮುನ್ನಡೆ – ನಿಖಿಲ್ ಕತ್ತಿ

ಪೈಪೋಟಿ – ಎ.ಬಿ ಪಾಟೀಲ್

********************

ಚಿಕ್ಕೋಡಿ ಸದಲಗಾ – ಪ್ರಕಾಶ್ ಹುಕ್ಕೇರಿ ಬಿಗಿ ಹಿಡಿತ ಕ್ಷೇತ್ರದ ಮೇಲೆ ಇದ್ದರು ಬಿಜೆಪಿ ಅಭ್ಯರ್ಥಿ ರಮೇಶ್ ಕತ್ತಿ ಪೈಪೋಟಿ ನೀಡುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಗಣೇಶ್ ಹುಕ್ಕೇರಿ ಇದ್ದು ಅವರು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಆದರೆ ಕೊನೆ ಕ್ಷಣದಲ್ಲಿ ಇದರ ಪರಿಣಾಮ ಏನಾದರು ಆಗಬಹುದು.

ಮುನ್ನಡೆ – ಗಣೇಶ್ ಹುಕ್ಕೇರಿ ( ಕಾಂಗ್ರೆಸ್ )

ಪೈಪೋಟಿ – ರಮೇಶ್ ಕತ್ತಿ ( ಬಿಜೆಪಿ )

*****************

ಯಮಕನಮರಡಿ – ಶಾಸಕ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಕ್ಷೇತ್ರದಲ್ಲಿ ಸಧ್ಯ ಕಾಂಗ್ರೆಸ್ ಪರವಾದ ಅಲೆ ಜೋರಾಗಿದ್ದು ಬಿಜೆಪಿ ಅಭ್ಯರ್ಥಿ ಕೂಡಾ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಆದರೆ ಈ ಬಾರಿ ಮತ್ತೊಂದು ಬಾರಿಗೆ ಕಾಂಗ್ರೆಸ್ ಗೆಲ್ಲುವು ಸಾಧಿಸಬಹುದು ಎಂಬ ಲೆಕ್ಕಾಚಾರ ಜೋರಾಗಿದೆ.

ಮುನ್ನಡೆ – ಸತೀಶ್ ಜಾರಕಿಹೊಳಿ ( ಕಾಂಗ್ರೆಸ್ )

ಪೈಪೋಟಿ – ಬಸವರಾಜ ಹುಂದ್ರಿ ( ಬಿಜೆಪಿ )

********************

ಅರಭಾವಿ – ಅರಭಾವಿ ಕ್ಷೇತ್ರದಲ್ಲಿ ಸಧ್ಯ ಹಾಲಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಇನ್ನೂ ಕಾಂಗ್ರೆಸ್ ನಿಂದ ಅರವಿಂದ ದಳವಾಯಿ ಸ್ಪರ್ಧೆ ಮಾಡಿದ್ದು ಪಕ್ಷೇತರರಾಗಿ ಭೀಮಪ್ಪ ಗಡಾದ ಇದ್ದಾರೆ. ಸಧ್ಯದ ಟ್ರೆಂಡ್ ನಲ್ಲಿ ಬಾಲಚಂದ್ರ ಜಾರಕಿಹೊಳಿ ಇದ್ದು ಇದೇ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.

ಮುನ್ನಡೆ – ಬಾಲಚಂದ್ರ ಜಾರಕಿಹೊಳಿ – ಬಿಜೆಪಿ

ಪೈಪೋಟಿ – ಭೀಮಪ್ಪ ಗಡಾದ – ಪಕ್ಷೇತರ

**********

ಖಾನಾಪುರ : ಕಾಂಗ್ರೆಸ್ ನಿಂದ ಅಂಜಲಿ ನಿಂಬಾಳ್ಕರ್ ಹಾಗೂ ಬಿಜೆಪಿಯಿಂದ ನಿಷ್ಠಾವಂತ ಕಾರ್ಯಕರ್ತ ವಿಠ್ಠಲ ಹಲಗೇಕರ ಅವರು ಸ್ಪರ್ಧೇ ಮಾಡಿದ್ದು ಈ ಒಬ್ಬರು ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಇದೆ. ಆದರೆ ಈ ಬಾರಿ ಬಿಜೆಪಿ ಗೆಲ್ಲುವ ಸಾಧ್ಯತೆ ದಟ್ಟವಾಗಿದ್ದು ಜನರ ಒಲವು ಹೆಚ್ಚಾಗಿದೆ.

ಮುನ್ನಡೆ – ವಿಠ್ಠಲ ಹಲಗೇಕರ – ಬಿಜೆಪಿ

ಪೈಪೋಟಿ – ಅಂಜಲಿ ನಿಂಬಾಳ್ಕರ್ – ಕಾಂಗ್ರೆಸ್

**********

ಬೆಳಗಾವಿ ಉತ್ತರ : ಸಧ್ಯ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದರು. ಜನರನ್ನು ಮುಟ್ಟುವಲ್ಲಿ ಬಿಜೆಪಿ ಸ್ವಲ್ಪ ಮುಂದೆ ಇದೆ. ಈ ಎಲ್ಲಾ ಕಾರಣಗಳಿಂದ ಗಮನಿಸಿದರೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿ ಕೊನೆ ಕ್ಷಣದ ಪ್ರಚಾರ ಕೈ ಹಿಡಿಯುವ ಸಾಧ್ಯತೆ ದಟ್ಟವಾಗಿದೆ.

ಮುನ್ನಡೆ – ಡಾ. ರವಿ ಪಾಟೀಲ್ – ಬಿಜೆಪಿ

ಪೈಪೋಟಿ – ಆಸಿಫ್ ಸೇಠ್ – ಕಾಂಗ್ರೆಸ್

************

ಬೆಳಗಾವಿ ದಕ್ಷಿಣ : ಬಿಜೆಪಿಯ ಭದ್ರಕೋಟೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಅಪರಿಚಿತ ಅಭ್ಯರ್ಥಿ ಕಣಕ್ಕೆ ಇಳಿದ ಹಿನ್ನಲೆಯಲ್ಲಿ ಈ ಬಾರಿ ಎಂಇಎಸ್ – ಬಿಜೆಪಿ ನಡುವೆ ಪೈಪೋಟಿ ಹೆಚ್ಚಾಗಿದೆ‌. ಆದರೆ ಅಭಯ್ ಪಾಟೀಲ್ ಪರವಾದ ಅಲೆ ಜೋರಾಗಿದ್ದು ಇದನ್ನು ತಡೆಯುವ ಶಕ್ತಿ ವಿರೋಧಿಗಳಲ್ಲಿ ಕಂಡುಬರುತ್ತಿಲ್ಲ. ಸಧ್ಯದ ಟ್ರೆಂಡ್ ಗಮನಿಸಿದರೆ ಮತ್ತೊಮ್ಮೆ ಅಭಯ್ ಪಾಟೀಲ್ ಗೆಲ್ಲುವುದರಲ್ಲಿ ಅನುಮಾನ ಇಲ್ಲ.

ಮುನ್ನಡೆ – ಅಭಯ್ ಪಾಟೀಲ್ – ಬಿಜೆಪಿ

****************

ಕಿತ್ತೂರು : ಬಿಜೆಪಿಯಿಂದ ಸ್ಪರ್ಧಿಸಿರುವ ಮಹಾಂತೇಶ್ ದೊಡ್ಡಗೌಡರ್ ಪರವಾದ ಅಲೆ ಜೋರಾಗಿದ್ದು ಸಧ್ಯದ ಟ್ರೆಂಡ್ ಪ್ರಕಾರ ಬಿಜೆಪಿ ಗೆಲುವು ಎಂದು ಹೇಳಬಹುದು. ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಅಷ್ಟೊಂದು ಜನರಲ್ಲಿ ಭರವಸೆ ಮೋಡಿಸಿದ್ದು ಕಂಡುಬಂದಿಲ್ಲ.

ಮುನ್ನಡೆ – ಮಹಾಂತೇಶ್ ದೊಡ್ಡಗೌಡರ್ – ಬಿಜೆಪಿ

ಪೈಪೋಟಿ : ಬಾಬಾಸಾಹೇಬ್ ಪಾಟೀಲ್ – ಕಾಂಗ್ರೆಸ್

****************

ಸವದತ್ತಿ :  ಈಗಾಗಲೇ ಜೆಡಿಎಸ್ ಅಭ್ಯರ್ಥಿ ಸೌರಬ್ ಚೌಪ್ರಾ ಹಾಗೂ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಡುವೆ ತೀವ್ರ ಪೈಪೋಟಿ ಇದೆ. ಸಧ್ಯದ ಟ್ರೆಂಡ್ ಗಮನಿಸಿದರೆ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದು ಇದೇ ಮುಂದುವರಿದರೆ ಬಿಜೆಪಿ ಗೆಲುವು ನಿಶ್ಚಿತ ಆಗಬಹುದು.

ಮುನ್ನಡೆ – ರತ್ನಾ ಮಾಮನಿ – ಬಿಜೆಪಿ

ಪೈಪೋಟಿ – ಸೌರಬ್ ಚೌಪ್ರಾ – ಜೆಡಿಎಸ್

*************

ನಿಪ್ಪಾಣಿ : ಈಗಾಗಲೇ ಎನ್ ಸಿ ಪಿ ಅಭ್ಯರ್ಥಿ ಉತ್ತಮ ಪಾಟೀಲ್ ಹಾಗೂ ಬಿಜೆಪಿಯ ಶಶಿಕಲಾ ಜೊಲ್ಲೆ ನಡುವೆ ಪೈಪೋಟಿ ನಡೆಯುತ್ತಿದ್ದು ಯಾರೇ ಗೆದ್ದರು ಅಚ್ಚರಿ ಇಲ್ಲ. ಶಶಿಕಲಾ ಜೊಲ್ಲೆ ಪರವಾದ ಅಲೆ ಇದ್ದರು, ಉತ್ತಮ ಪಾಟೀಲ್ ಪರವಾಗಿ ಅಷ್ಟೇ ಪ್ರಮಾಣದಲ್ಲಿ ಬೆಂಬಲಿಗರಿದ್ದಾರೆ. ಜೊತೆಗೆ ಕ್ಷೇತ್ರದ ಎಲ್ಲಾ ಸಮುದಾಯದ ಜನ ಇವರ ಪರವಾದ ಅಲೆ ಹುಟ್ಟುಹಾಕಿದ್ದು, ನಿಪ್ಪಾಣಿಯಲ್ಲಿ ಈ ಬಾರಿ ಎನ್ ಸಿ ಪಿ ಧ್ವಜ ಹಾರಿದರು ಅಚ್ಚರಿ ಇಲ್ಲ.

ಮುನ್ನಡೆ – ಶಶಿಕಲಾ ಜೊಲ್ಲೆ – ಬಿಜೆಪಿ

ಪೈಪೋಟಿ – ಉತ್ತಮ ಪಾಟೀಲ್ – ಎನ್ ಸಿ ಪಿ

**************

Advertisement

Leave a reply

Your email address will not be published. Required fields are marked *

error: Content is protected !!