Select Page

ಎಸ್ಪಿ ಅನುಪಸ್ಥಿತಿಯಲ್ಲಿ ಯಶಸ್ವಿಯಾಗಿ ಜರುಗಿದ ಫೋನ್ ಇನ್ ಕಾರ್ಯಕ್ರಮ

ಎಸ್ಪಿ ಅನುಪಸ್ಥಿತಿಯಲ್ಲಿ ಯಶಸ್ವಿಯಾಗಿ ಜರುಗಿದ ಫೋನ್ ಇನ್ ಕಾರ್ಯಕ್ರಮ

ಬೆಳಗಾವಿ ‌: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ನೇತೃತದಲ್ಲಿ ನಡೆಸುತ್ತಿರುವ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರ ಅನುಪಸ್ಥಿತಿಯಲ್ಲಿ ಅವರ ತಂಡ ಶನಿವಾರ 15ನೇ ಫೋನ್ ಇನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಚಿಕ್ಕೋಡಿಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆ ನಡೆಸಲು ಹೋಗಿರುವ ಎಸ್ಪಿ ಸಂಜೀವ ಪಾಟೀಲ ಅವರ ಅನುಪಸ್ಥಿತಿಯಲ್ಲಿ ಅವರ ತಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಜನರು ಕರೆ ಮಾಡಿ ಸಮಸ್ಯೆ ಹೇಳಿಕೊಂಡರು.

ಖಾಸಬಾಗ ನಗರದ ಮಹಿಳೆಯೊರ್ವರು ಕರೆ ಮಾಡಿ ಕಳೆದ ಮಾರ್ಚ್ ತಿಂಗಳಲ್ಲಿ ಅಂಬೇವಾಡಿಲ್ಲಿ ನಮ್ಮ ಸಹೋದರನ ಅಪಘಾತವಾಗಿತ್ತು. ಆದರೆ ಇದು ಅಪಘಾತವಲ್ಲ. ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಅವರು ಎಫ್ ಐಆರ್ ಕಾಫಿ ನೀಡುತ್ತಿಲ್ಲ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ತಂಡ ಇದು ನಗರ ಪೊಲೀಸ್ ಇಲಾಖೆಗೆ ಬರುವುದರಿಂದ ಪೊಲೀಸ್ ಆಯುಕ್ತರ ಕಚೇರಿಗೆ ಮಾಹಿತಿ ತಿಳಿಸಲಾಗುವುದು ಎಂದರು.

ಅಥಣಿ ತಾಲೂಕಿನ ವ್ಯಕ್ತಿಯೊರ್ವ ಕರೆ ಮಾಡಿ, ತಾಲೂಕಿನಲ್ಲಿ ಅಕ್ರಮವಾಗಿ ಮರಳು ದಂಧೆ ಕೋರರಿಗೆ ಜಿಲ್ಲಾ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಅಕ್ರಮ ಸರಾಯಿ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ದೂರಿದರು. ಇದಕ್ಕೆ ಸ್ಪಂದಿಸಿ ಎಸ್ಪಿ ತಂಡ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಮದುರ್ಗ ತಾಲೂಕಿನ ವ್ಯಕ್ತಿಯೊರ್ವ ಕರೆ ಮಾಡಿ ತಾಲೂಕಿನಲ್ಲಿ ಕೆಲ ಕಿಡಿಗೇಡಿಗಳು ಕುಡಿದು ವಾಹನ ಚಲಾವಣೆ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಅಂಥ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ತಂಡ ರಾಮದುರ್ಗ ಪೊಲೀಸರಿಗೆ ತಿಳಿಸಿ ಸಮಸ್ಯೆ ಬಗೆ ಹರಿಸುವುದಾಗಿ ತಿಳಿಸಿದರು.

ಅಕ್ರಮ ಸರಾಯಿಗೆ ಕಡಿವಾಣ, ಜೂಜಾಟ, ಟ್ರಾಫಿಕ್ ಸಮಸ್ಯೆ, ಕೌಟುಂಬಿಕ ಕಲಹ, ಜಮೀನು ವಿವಾದ, ನಕಲಿ ಪತ್ರಕರ್ತರ ಹಾವಳಿ ತಡೆಯುವುದು, ಆನ್ ಲೈನ್ ವಂಚನೆ, ನಗರದ ಜನತೆಯ ಸಮಸ್ಯೆ ಸೇರಿದಂತೆ ಜಿಲ್ಲೆಯ ಜನರು ವಿವಿಧ ಸಮಸ್ಯೆಯನ್ನು ಎಸ್ಪಿ ನೇತೃತ್ವದ ತಂಡದ ಎದುರು ಅಳಲನ್ನು ತೋಡಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಸ್ಪಿ ಅವರ ತಂಡ ಎಲ್ಲ ಕರೆಗಳನ್ನು ಸ್ವೀಕರಿಸಿ ಜನರ ಸಮಸ್ಯೆ ಆಲಿಸಿ ಪರಿಹರಿಸಿದರು.

ಪಿಎಸ್ಐಗಳಾದ ಮಂಜುನಾಥ ಅರೇನರ, ಪ್ರಭು ಮುತ್ತತ್ತಿ, ರಂಜಿತ ಗೀಲ್, ಎಎಸ್ ಐ ಶೆಟ್ಟಣ್ಣವರ, ಬಳೆಗಾರ ವಿಠ್ಠಳ ತಳವಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!