Select Page

Advertisement

ಪೊಲೀಸ್ ಇನ್ಸ್ಪೆಕ್ಟರ್ ಆದ 8 ವರ್ಷದ ಬಾಲಕ ; ಹೇಗಿತ್ತು ಅಜಾನ್ ಖಾನ್ ಕೆಲಸ?

ಪೊಲೀಸ್ ಇನ್ಸ್ಪೆಕ್ಟರ್ ಆದ 8 ವರ್ಷದ   ಬಾಲಕ ; ಹೇಗಿತ್ತು ಅಜಾನ್ ಖಾನ್ ಕೆಲಸ?

ಶಿವಮೊಗ್ಗ : ಈತ ಕೇವಲ ಎಂಟು ವಯಸ್ಸಿನ ಪೋರ, ಶಿವಮೊಗ್ಗ ಜಿಲ್ಲೆಯ ಪೊಲೀಸ್ ಠಾಣೆ ಒಂದರಲ್ಲಿ ಒಂದು ದಿನದ ಮಟ್ಟಿಗೆ ಪೊಲೀಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾನೆ. ಹಾಗಾದ್ರೆ ಏನಪ್ಪಾ ವಿಶೇಷ ಅಂತಿರೋರು ಈ ಸ್ಟೋರಿ ಓದಿ‌.

ಹೌದು ಶಿವಮೊಗ್ಗದ ಸೂಳೇ ಬೈಲು ಬಡಾವಣೆಯ ಬಾಲಕ ಆಜಾನ್ ಖಾನ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದಾನೆ. ಕಳೆದ ಕೆಲ ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಈ ಬಾಲಕನ ಕೊನೆಯ ಆಸೆ ಪೊಲೀಸ್ ಅಧಿಕಾರಿ ಆಗಬೇಕು ಎಂಬುದು.

ಬಾಲಕನ ಆಸೆಗೆ ತಣ್ಣೀರು ಎರಚದೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಅವರು, ಆಯಾಜ್ ಖಾನ್ ನನ್ನು ಒಂದು ಗಂಟೆ ಮಟ್ಟಿಗೆ ಇನ್ಸ್‌ಪೆಕ್ಟರ್‌ ಮಾಡುವ ಮೂಲಕ ಆತನ ಕನಸು ನನಸು ಮಾಡಿದ್ದಾರೆ. 

ಕೇವಲ ಒಂದು ಗಂಟೆಯ ಸಮಯಕ್ಕೆ ಮಾತ್ರ ಸಾಂಕೇತಿಕವಾಗಿ ಇನ್ಸ್‌ಪೆಕ್ಟರ್‌ ಕುರ್ಚಿಯನ್ನು ಅಲಂಕರಿಸಿದ. ಪೊಲೀಸ್ ಸಿಬ್ಬಂದಿಗಳಿಗೆ ಯೋಗಕ್ಷೇಮ ವಿಚಾರಿಸಿ ರಜೆ ಮಂಜೂರು ಮಾಡಿದ. ಕಳ್ಳ ಕಾಕರಿಗೆ ಆವಾಜ್ ಹಾಕಿ ಕಳ್ಳತನ ಬಿಟ್ಟು ಕೆಲಸ ಮಾಡಿ ಎಂದು ಸಲಹೆ ನೀಡಿದ ಬಾಲಕ ಇನ್ಸ್‌ಪೆಕ್ಟರ್‌.

Advertisement

Leave a reply

Your email address will not be published. Required fields are marked *

error: Content is protected !!