![ಕನ್ನಡ ಬಿಗ್ ಬಾಸ್ ನಿಂದ ಐಶ್ವರ್ಯ ಸಿಂಧೋಗಿ ಔಟ್…?](https://belagavivoice.com/wp-content/uploads/2024/12/images-75-150x150.jpeg)
Video – ನೋಡುವ ದೃಷ್ಟಿಕೋನ ಕರೆಕ್ಟ್ ಇರಬೇಕು ; ಸವದಿ ಬೆಂಬಲಿಗರಿಗೆ ಸಚಿವ ಸತೀಶ್ ಟಾಂಗ್
![Video – ನೋಡುವ ದೃಷ್ಟಿಕೋನ ಕರೆಕ್ಟ್ ಇರಬೇಕು ; ಸವದಿ ಬೆಂಬಲಿಗರಿಗೆ ಸಚಿವ ಸತೀಶ್ ಟಾಂಗ್](https://belagavivoice.com/wp-content/uploads/2024/06/IMG-20240608-WA0090-1.jpg)
ಬೆಳಗಾವಿ : ನಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಎಲ್ಲಾ ಪಕ್ಷದ ಮುಖಂಡರು ಕೆಲಸಕ್ಕಾಗಿ ಮನೆಗೆ ಭೇಟಿ ನೀಡುವುದು ಅಹಜ, ಆದರೆ ಅಥಣಿಯವರು ನೋಡುವ ದೃಷ್ಟಿಕೋನ ಉಲ್ಟಾ ಇದೆ ಎಂದು ಲಕ್ಷ್ಮಣ ಸವದಿ ಬೆಂಬಲಿಗರಿಗೆ ಸಚಿವ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದರು.
ಆಥಣಿ ಮಾಜಿ ಬಿಜೆಪಿ ಶಾಸಕ ಮಹೇಶ್ ಕುಮಠಳ್ಳಿ ಸಚಿವ ಸತೀಶ್ ಮನೆಗೆ ಭೇಟಿ ನೀಡಿದ್ದಕ್ಕೆ ಸವದಿ ಬೆಂಬಲಿಗರು ನೀಡಿದ್ದ ಪ್ರತಿಕ್ರಿಯೆಗೆ ಉತ್ತರಿಸಿ ಮಾತನಾಡಿದ ಇವರು. ಮಾಜಿ ಶಾಸಕ ಕುಮಟಳ್ಳಿ ನಮ್ಮ ಮನೆಗೆ ಬಂದಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ.
ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ನಾವು ಅವರ ಮನೆಗೆ ಹೋಗುತ್ತಿದ್ದೇವು, ಈಗ ನಾವು ಅಧಿಕಾರದಲ್ಲಿ ಇದ್ದಿದ್ದರಿಂದ ನಮ್ಮ ಮನೆಗೆ ಅವರು ಬಂದಿದ್ದಾರೆ ಅಷ್ಟೇ ಎಂದರು.
ಕುಮಠಳ್ಳಿ ಅಷ್ಟೇ ಅಲ್ಲ, ಶ್ರೀಮಂತ ಪಾಟೀಲ್, ದುರ್ಯೋಧನ ಐಹೊಳೆ, ಎಸ್.ಟಿ. ಸೋಮಶೇಖರ್, ವಿಠ್ಠಲ್ ಹಲಗೆಕರ್ ಸೇರಿದಂತೆ ಬಿಜೆಪಿ ಹಲವು ಶಾಸಕರು, ನಾಯಕರು ನಮ್ಮ ಮನೆಗೆ ಬರುತ್ತಾರೆ. ಕೆಲಸ, ಕಾರ್ಯಗಳಿದ್ದರೆ ನಾಯಕರು ಬರುವುದು ಸಹಜವೆಂದರು.