ಪೆಟ್ರೋಲ್ & ಡೀಸೆಲ್ ಬೆಲೆ ಹೆಚ್ಚಿಸಿದ ರಾಜ್ಯ ಸರ್ಕಾರ ; ವಾಹನ ಸವಾರರಿಗೆ ಶಾಕ್
ಬೆಂಗಳೂರು : ವಾಹನ ಸವಾರರಿಗೆ ಶಾಕ್ ನೀಡಿರುವ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಮಾಡಿ ಆದೇಶ ಹೊರಡಿಸಿದೆ.
ನೂತನ ದರದ ಅನ್ವಯ ಪೆಟ್ರೋಲ್ – 3 ರೂ. ಹಾಗೂ ಡಿಸೇಲ್ – 3.50 ರೂ. ಹೆಚ್ಚಳ ಮಾಡಿದ್ದು ಇದರಿಂದ ಜನಸಾಮಾನ್ಯರಿಗೆ ಸಂಕಷ್ಟ ಎದುರಾಗಲಿದೆ.
ಗ್ಯಾರಂಟಿ ಹುಮ್ಮಸ್ಸಿನಲ್ಲಿದ್ದ ರಾಜ್ಯ ಸರ್ಕಾರ ಚುನಾವಣೆ ನಂತರದಲ್ಲಿ ಬೆಲೆ ಏರಿಕೆ ಬಿಸಿ ಮುಟ್ಟಿಸಿದ್ದು, ಇದರಿಂದ ವಸ್ತುಗಳ ಬೆಲೆ ಏರಿಕೆ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.