
ರಾಯಬಾಗ – ಆಸ್ತಿ ವಿಚಾರವಾಗಿ ಸ್ವಂತ ಸಹೋದರನ ಕೊಂದ ಪಾಪಿ ಅಂದರ್

ಬೆಳಗಾವಿ : ಆಸ್ತಿ ವಿಚಾರವಾಗಿ ಸ್ವಂತ ತಮ್ಮನನ್ನು ಅಪಹರಿಸಿ ಸಹೋದದರು ಕೊಲೆ ಮಾಡಿರುವ ಘಟನೆ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ.
ಜೂನ್ 4 ರಂದು ತಾಲೂಕಿನ ಸುಲ್ತಾನಪುರ ಗ್ರಾಮದ
ಯುವಕ ಈರಪ್ಪ ಚೌಗಲಾ (24) ಎಂಬಾತನನ್ನು
ಅಪಹರಿಸಿ, ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್
ಠಾಣೆ ವ್ಯಾಪ್ತಿಯ ಕೊರ್ತಿ ಕೊಲಾರ ಜಾಕ್ವೆಲ್ ಹತ್ತಿರ ಕೊಲೆ
ಮಾಡಿ ಮೃತದೇಹ ಎಸೆಯಲಾಗಿತ್ತು.
ಈ ಪ್ರಕರ ಕುರಿತು ತನಿಖೆ ನಡೆಸಿದ್ದ ಬೆಳಗಾವಿ ಜಿಲ್ಲಾ ಪೊಲೀಸರು ಘಟನೆ ನಡೆದ 10 ದಿನಗಳಲ್ಲಿ ಪ್ರಕರಣ ಬೇಧಿಸುವಲ್ಲಿಯಶಸ್ವಿಯಾಗಿದ್ದಾರೆ.
ಮೃತ ಯುವಕ ಈರಪ್ಪ ಚೌಗಲಾ ನನ್ನು ಕೊಲೆ ಮಾಡುವಂತೆ ಇತನ ಹಿರಿಯ ಸಹೋದರರ ಶ್ರೀಶೈಲ್ ಚೌಗಲಾ ಸುಪಾರಿ ನೀಡಿದ್ದಾನೆ. ಕೊಲೆ ಸುಪಾರಿ ಪಡೆದ ಎಂಟು ಜನ
ಆರೋಪಿಗಳು ಈರಪ್ಪನನ್ನು ಅಪಹರಿಸಿ ಬಾಗಲಕೋಟೆಯ ಕೊರ್ತಿ ಕೊಲಾರ ಜಾಕ್ವೆಲ್ ಬಳಿ ಕೊಲೆ ಮಾಡಿ ಮೃತದೇಹ ಎಸೆದಿರುವುದಾಗಿ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಈಗಾಗಲೇ ಎಂಟು ಜನ ಆರೋಪಿಗಳನ್ನು ಬಂಧಿಸಲಾಗಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೆದ್ ಮಾಹಿತಿ ನೀಡಿದ್ದಾರೆ.