VIDEO – ಸವದತ್ತಿ ಪೊಲೀಸರ ಚಳಿ ಬಿಡಿಸಿದ ಯುವಕ : ಈ ವೈರಲ್ ವೀಡಿಯೋ ಮಿಸ್ ಮಾಡದೇ ನೋಡಿ
ಬೆಳಗಾವಿ : ಮಾರ್ಗಮಧ್ಯೆ ಕೈ ಅಡ್ಡಹಾಕಿ ವಾಹನಗಳನ್ನು ನಿಲ್ಲಿಸಿ ಹಣ ವಸೂಲಿ ಮಾಡುವ ಪೊಲೀಸರ ಕೃತ್ಯಕ್ಕೆ ಆಕ್ರೋಶಗೊಂಡ ಯುವಕನೋರ್ವ ಸವದತ್ತಿ ಪೊಲೀಸರ ಚಳಿ ಬಡಿಸಿದ ಘಟನೆ ನಡೆದಿದೆ.
ಹೌದು ಕ್ಷುಲ್ಲಕ ಕಾರಣಕ್ಕೆ ಯುವಕನ ಕಾರು ತಡೆದು ಹಣಕ್ಕೆ ಬೇಡಿಕೆ ಇಟ್ಟ ಪೊಲಿಸಪ್ಪನಿಗೆ ಸರಿಯಾಗಿ ಚಳಿ ಬಿಡಿಸಿದ ಯುವಕ ಕಾನೂನು ಪಾಠ ಮಾಡಿದ್ದಾನೆ. ಇವನು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ, ಪೊಲೀಸ್ ಸಿಬ್ಬಂದಿಗಳು ತಬ್ಬಿಬ್ಬಾದ ಘಟನೆ ವೀಡಿಯೋ ವೈರಲ್ ಆಗಿದೆ.
ಇನ್ನೂ ಯುವಕ ಕೇಳುವ ಪ್ರಶ್ನೆಗೆ ಪೊಲೀಸರಿಂದ ಯಾವುದೇ ಉತ್ತರ ಬಂದಿಲ್ಲ. ಕೇವಲ ಹಣ ಕೀಳಲು ವಾಮಮಾರ್ಗ ಮಾಡಿಕೊಂಡ ಪೊಲೀಸರಿಗೆ ಯುವಕ ಸರಿಯಾಗಿ ಮಾತನಾಡಿದ್ದಾನೆ. ಒತೆಗೆ ಕಾನೂನು ಪಾಠವನ್ನು ಭೋಧಿಸಿದ್ದಾನೆ.
ಸಧ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಜೊತೆಗೆ ಯುವಕನ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.