ಖಡಕ್ ಪೊಲೀಸ್ ಅಧಿಕಾರಿ ಸೀಮಾ ಲಾಟ್ಕರ್ ಮೈಸೂರು ಎಸ್ಪಿಯಾಗಿ ನೇಮಕ
ಬೆಂಗಳೂರು : ಖಡಕ್ ಮಹಿಳಾ ಪೊಲೀಸ್ ಅಧಿಕಾರಿ ಎಂದೇ ಖ್ಯಾತಿ ಹೊಂದಿರುವ ಸೀಮಾ ಲಾಟ್ಕರ್ ಅವರು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಚುನಾವಣೆ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಪೊಲೀಸ್ ಇಲಾಖೆ ಸರ್ಜರಿ ಮಾಡಲಾಗುತ್ತಿದ್ದು ಇಂದು ನಾಲ್ವರು ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಗುಪ್ತಚರ ಇಲಾಖೆ ಬೆಂಗಳೂರು ಎಸ್ ಪಿ ಯಾಗಿ ಆರ್.ಚೇತನ್. ಮೈಸೂರು ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೀಮಾ ಲಾಟ್ಕರ್ . ಎಐ ಜಿಪಿ, ಸಿಸಿಬಿ ಬೆಂಗಳೂರು, ಶಿವಪ್ರಕಾಶ್ ದೇವರಾಜ್, ಮೈಸೂರು ಡಿಸಿಪಿ, ಕಾನೂನು ಸುವ್ಯವಸ್ಥೆ ಎಂ.ಮುತ್ತುರಾಜ್, ಗದಗ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ಬಾಬಾಸಾಬ್ ನೇಮಗೌಡ ಅವರನ್ನು ನೇಮಕ ಮಾಡಲಾಗಿದೆ.