Select Page

ಕೊನೆ ಕ್ಷಣದಲ್ಲಿ‌‌ ಲೋಕಸಭಾ ಅಖಾಡಕ್ಕೆ ಸಾಹುಕಾರ್ ಪುತ್ರಿ ಪ್ರಿಯಾಂಕಾ..!

ಕೊನೆ ಕ್ಷಣದಲ್ಲಿ‌‌ ಲೋಕಸಭಾ ಅಖಾಡಕ್ಕೆ ಸಾಹುಕಾರ್ ಪುತ್ರಿ ಪ್ರಿಯಾಂಕಾ..!

ಬೆಳಗಾವಿ : ಬೆಳಗಾವಿ ಲೋಕಸಭಾ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಬಾರಿ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಗೆದ್ದು ಇತಿಹಾಸ ಸೃಷ್ಟಿಸಲು ಸಚಿವ ಸತೀಶ್ ಹಾಗೂ ಲಕ್ಷೀ ಹೆಬ್ಬಾಳ್ಕರ್ ನಿರ್ಧರಿಸಿದ್ದಾರೆ. ಆದರೆ ಈ ಮಧ್ಯೆ ಅಭ್ಯರ್ಥಿ ಯಾರಾಗಬೇಕು ಎಂಬ ಲೆಕ್ಕಾಚಾರ ಅನೇಕರಲ್ಲಿ ಕಾಡುತ್ತಿದೆ.

ಬೆಳಗಾವಿ ಲೋಕಸಭೆಗೆ ಈ ಬಾರಿ ಸಚಿವ ಸತೀಶ್ ಜಾರಕಿಹೊಳಿ ಅಥವಾ ಸಚಿವೆ ಲಕ್ಷೀ ಹೆಬ್ಬಾಳ್ಕರ್ ಇಬ್ಬರಲ್ಲಿ ಒಬ್ಬರು ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಇಬ್ಬರೂ ನಾಯಕರು ಪ್ರಮುಖ ಖಾತೆ ನಿಭಾಯಿಸುತ್ತಿದ್ದು ಲೋಕಸಭಾ ಚುನಾವಣೆ ಸ್ಪರ್ಧೆಗೆ ಒಲವು ಹೊಂದದ ಕಾರಣ ಬೇರೆ ಅಭ್ಯರ್ಥಿಗಳಿಗೆ ಹುಡುಕಾಟ ನಡೆಸಲಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಪ್ರಭಲ ಲಿಂಗಾಯತ ಸಮುದಾಯದ ಒಬ್ಬರು ಅಭ್ಯರ್ಥಿ ಆದರೆ ಹೆಚ್ಚು ಲಾಭ ಎಂಬ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃನಾಲ್ ಅವರಿಗೆ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತಾರೆ ಎಂದು ಸ್ವತಃ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು. ಆದರೆ ಈವರೆಗೂ ಕಾಂಗ್ರೆಸ್ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃನಾಲ್ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆ ಮಾಡುವ ಸಂಭವ ಇದೆ ಎಂಬುದು ಕಾಂಗ್ರೆಸ್ ವಲಯಗಳಿಂದ ಕೇಳಿಬರುತ್ತಿದೆ. ಆದರೆ ಮಗಳು ಲೋಕಸಭಾ ಸ್ಪರ್ಧೆಗೆ ಸಚಿವ ಸತೀಶ್ ಒಪ್ಪಿಗೆ ನೀಡುವುದು ಅನುಮಾನ ಎನ್ನಲಾಗುತ್ತಿದೆ.

ತಂದೆಯ ಕಳೆದ ಲೋಕಸಭಾ ಉಪ ಚುನಾವಣೆ ಹಾಗೂ 2023 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಕ್ಕಳಾದ ಪ್ರಿಯಾಂಕಾ ಹಾಗೂ ರಾಹುಲ್ ನಿರಂತರ ಪ್ರಚಾರ ಕಾರ್ಯ ನಡೆಸುವ ಮೂಲಕ ಹೆಚ್ಚಿನ ಮತಗಳಿಂದ ಗೆಲ್ಲಿಸಲು ಪ್ರಯತ್ನಿಸಿದ್ದರು. ಈ ಬಾರಿ ಲೋಕಸಭಾ ಚುನಾವಣಾ ಕಣಕ್ಕೆ ಇಳಿಯುವ ಮೂಲಕ ಜಾರಕಿಹೊಳಿ ಕುಟುಂಬದ ಕುಡಿಗಳು ರಾಜಕೀಯ ಹಾದಿಗೆ ಇಳಿಯುತ್ತಾರಾ ಎಂಬುದಕ್ಕೆ ಕಾಲವೇ ಉತ್ತರ‌.

Priyanka jarakiholi, Satish jarakiholi, Laxmi hebalkar, Mrinal habalkar,

Advertisement

Leave a reply

Your email address will not be published. Required fields are marked *

error: Content is protected !!