ಸಿದ್ದಾಪುರ – ಬೆಳಗಾವಿ ನೂತನ ಬಸ್ ಸೇವೆ ಆರಂಭ : ಗಡಿ ಗ್ರಾಮಗಳಲ್ಲಿ ಸಂಭ್ರಮ
ರಾಯಬಾಗ : ತಾಲೂಕಿನ ಗಡಿ ಗ್ರಾಮವಾದ ಸಿದ್ದಾಪುರ ದಿಂದ ಬೆಳಗಾವಿ ನಗರಕ್ಕೆ ರಾಯಬಾಗ ಸಾರಿಗೆ ಸಂಸ್ಥೆಯಿಂದ ಬುಧವಾರ ನೂತನ ಬಸ್ ಸಂಚಾರ ಪ್ರಾರಂಭವಾಯಿತು.
ಅಥಣಿ ತಾಲೂಕಿನ ಗಡಿ ಹಂಚಿಕೊಂಡಿರುವ ಸಿದ್ದಾಪುರ ಗ್ರಾಮದಿಂದ ಬೆಳಗಾವಿಗೆ ಸಂಪರ್ಕ ಸಾಧಿಸಯವ ಬಸ್ ವ್ಯವಸ್ಥೆಗಾಗಿ ಜನರ ಬಹುದಿನಗಳ ಬೇಡಿಕೆ ಇಂದು ಈಡೇರಿದೆ. ಸಿದ್ದಾಪುರ ದಿಂದ ಬೆಳಗಾವಿ ಬಸ್ ಸಂಚಾರ ಆರಂಭಿಸಿರುವುದರಿಂದ ಖೇಮಲಾಪುರ, ಪರಮಾನಂದವಾಡಿ, ಸಪ್ತಸಾಗರ, ನದಿ – ಇಂಗಳಗಾಂವ, ದರೂರ, ಚಿಕ್ಕೂಡ, ತೀರ್ಥ, ಶಿರಗೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಇದು ಅನುಕೂಲವಾಗಿದೆ.
ನೂತನ ಬಸ್ ಸಿದ್ದಾಪುರ ಗ್ರಾಮದಿಂದ ಆರಂಭಿಸಲಿದೆ ಎಂದು ತಿಳಿಯುತ್ತಿದ್ದಂತೆ ಬೆಳಿಗ್ಗೆ ಗ್ರಾಮಸ್ಥರು ನೂತನ ಬಸ್ ಗೆ ಹೂವಿನ ಹಾರ ಹಾಕಿ ಬಸ ಚಾಲಕ ಮತ್ತು ನಿರ್ವಾಹಕರಿಗೆ ಹೂಗುಚ್ಛ ನೀಡಿ, ತೆಂಗಿನಕಾಯಿ ಒಡೆಯುವುದರ ಮೂಲಕ ಧಾರ್ಮಿಕವಾಗಿ ಸ್ವಾಗತಿಸಿದರು, ಈ ಮೂಲಕ ಗ್ರಾಮಸ್ಥರು ತಮ್ಮ ಬಹುದಿನ ಬೇಡಿಕೆ ಈಡೇರಿದನ್ನು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಅಣ್ಣಪ್ಪಾ ಅರಗಿ, ಸಿದ್ದಗೌಡ ಪಾಟೀಲ, ಅಮರ ಚಿಂಚಲಿ, ಬಸು ಇಂಗಳಿ, ಮಲಗೌಡ ಪಾಟೀಲ, ಸುರೇಶ ಹಿರೇಮಠ, ಕುಮಾರ ಹೊನವಾಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.