ಅಥಣಿಯಲ್ಲಿ ಹುಚ್ಚು ನಾಯಿ ಹುಚ್ಚಾಟ : ಪಶು ಆಸ್ಪತ್ರೆಯಲ್ಲಿ ಚುಚ್ಚುಮದ್ದು ಸಿಗದೆ ರೈತರು ಕಂಗಾಲು
ಅಥಣಿ : ತಾಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ಹುಚ್ಚುನಾಯಿ ದಾಳಿಯಿಂದ ಹತ್ತಕ್ಕೂ ಹೆಚ್ಚು ಜಾನುವಾರುಗಳು ಗಾಯಗೊಂಡಿದ್ದು, ಕಟಗೇರಿ ಪಶು ಆಸ್ಪತ್ರೆಯಲ್ಲಿ ಚುಚ್ಚು ಮದ್ದು ಇಲ್ಲದೆ ರೈತರು ಕಂಗಾಲಾಗಿರುವ ಘಟನೆ ನಡೆದಿದೆ.
ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ನಾಯಿಗೆ ಹುಚ್ಚು ಹಿಡಿದ ಪರಿಣಾಮ,, ತಡರಾತ್ರಿಯಿಂದ ಇಲ್ಲಿಯವರೆಗೆ ಐದು ಎಮ್ಮೆ ಹಾಗೂ ಐದು ಆಡಿನ ಮೇಲೆ ದಾಳಿ ಮಾಡಿ ಕಬ್ಬಿನ ತೋಟದಲ್ಲಿ ಅಡಗಿಕೊಂಡಿದೆ. ನಾಯಿಯ ದಾಳಿಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಕಟಗೇರಿ ಪಶು ಆಸ್ಪತ್ರೆಯಲ್ಲಿ ಚುಚ್ಚು ಮದ್ದು ಇಲ್ಲದೆ ರೈತರು ಕಂಗಾಲಾಗಿದ್ದು, ಸ್ಥಳಕ್ಕೆ ಕಟಗೇರಿ ಪಶು ವೈದ್ಯರು ಬೇಟಿ ನೀಡಿದ್ದಾರೆ. ಆದರೆ ಇದುವರೆಗೂ ಹುಚ್ಚು ನಾಯಿ ಸಿಕ್ಕಿಲ್ಲ.