Select Page

ಅಪ್ರಾಪ್ತ ಬಾಲಕಿ ಮದುವೆ ಆರೋಪ, ಪ್ರಕರಣ ದಾಖಲು ; ಐಪಿಎಸ್ ಅಧಿಕಾರಿ ಸ್ಪಷ್ಟನೆ ಏನು….?

ಅಪ್ರಾಪ್ತ ಬಾಲಕಿ ಮದುವೆ ಆರೋಪ, ಪ್ರಕರಣ ದಾಖಲು ; ಐಪಿಎಸ್ ಅಧಿಕಾರಿ ಸ್ಪಷ್ಟನೆ ಏನು….?

ಬೆಳಗಾವಿ : ಐಪಿಎಸ್ ಅಧಿಕಾರಿ ವಿರುದ್ಧ ಅಪ್ರಾಪ್ತ ಬಾಲಕಿ ಮದುವೆ ಮಾಡಿಸಿರುವ ಆರೋಪದ ಬೆನ್ನಲ್ಲೇ ವಿವಾಹಿತ ಯುವಕನ ವಿರುದ್ಧ ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಮ್ಮ ಮಗಳು ಅಪ್ರಾಪ್ತೆ ಎಂದು ತಿಳಿಸಿದ್ದರು ಐಪಿಎಸ್ ಅಧಿಕಾರಿ ಗದಾಡಿ ಅವರು ಆದಾರ್ ಕಾರ್ಡ್ ತಿದ್ದುಪಡಿ ಮಾಡಿಸಿ ಮದುವೆ ಮಾಡಿಸಿದ್ದಾರೆ ಎಂದು ಅಪ್ರಾಪ್ತ ಬಾಲಕಿ ಪತಿ ಹಾಗೂ ಆಕೆಯ ತಾಯಿ ಗಂಭೀರ ಆರೋಪ ಮಾಡಿದ್ದಾರೆ.

ಸಧ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥಣಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಲ್ಯ ವಿವಾಹ ಹಾಗೂ ಅತ್ಯಾಚಾರ ಆರೋಪದ ಮೇಲೆ ಅಪ್ರಾಪ್ತ ಬಾಲಕಿ ಪತಿ ರಾಜೇಂದ್ರ ಗದಾಡೆ ವಿರುದ್ಧ ಪ್ರಕರಣ ದಾಖಲಾಗಿದೆ.

IPS ಅಧಿಕಾರಿ ವೀಡಿಯೋ ಹೇಳಿಕೆ : ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿರುವ ಬೆಳಗಾವಿ ವಿಭಾಗ ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್ಪಿ ರವೀಂದ್ರ ಕೆ. ಗದಾಡಿ. ಮನೆಯ ಪಕ್ಕದಲ್ಲಿ ಮದುವೆ ಇದ್ದ ಕಾರಣಕ್ಕೆ ಸಾಮಾನ್ಯವಾಗಿ ಬೇಟಿ ನೀಡಿದ್ದೇನೆ.‌ ಕೆಲವರು ಅನೇಕ ದಿನಗಳಿಂದ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಕಾನೂನು ತನಿಖೆ ನಡೆಯಲಿ. ಪ್ರಕರಣಕ್ಕೂ, ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಜೊತೆಗೆ ಮದುವೆ ಸಂದರ್ಭದಲ್ಲಿ ತಾವು ಭಾಗವಹಿಸಿರುವ ಪೋಟೋ ಹಂಚಿಕೊಂಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!