ಸಾಧಕಿ ನೌಸಿನ ಪಠಾಣಗೆ ಸನ್ಮಾನ
ಬೆಳಗಾವಿ : ಸಾಧನೆ ಸಾಧಕರ ಸೊತ್ತು. ಸತತ ಪರಿಶ್ರಮ ಹಾಗೂ ಅಧ್ಯಯನದಿಂದ ಮಾತ್ರ ಸಾಧನೆ ಸಾಧ್ಯವಿದೆ. ಆ ನಿಟ್ಟಿನಲ್ಲಿ ನೌಸಿನ ಪಠಾಣ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಎಂ.ಬಿ.ಎ. ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ” ಎಂದು ಸುರೇಶ ಯಾದವ ಫೌಂಡೇಶನ್ ಸಂಸ್ಥಾಪಕ ಸುರೇಶ ಯಾದವ ಅಭಿಪ್ರಾಯ ಪಟ್ಟರು.
ಸುರೇಶ ಯಾದವ ಫೌಂಡೇಶನ್ ವತಿಯಿಂದ ನೌಸಿನ ಪಠಾಣ ಅವರನ್ನು ಸತ್ಕರಿಸಿ ಮಾತನಾಡಿದ ಅವರು, ” ಶಿಕ್ಷಣವೇ ಸಕಲ ಸಂಕಷ್ಟಗಳಿಗೆ ಪರಿಹಾರ ಆಗಿರುವುದರಿಂದ ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿಕೊಂಡು ಹೆಚ್ಚಿನ ಸಾಧನೆ ಮಾಡಬೇಕು” ಎಂದು ಹೇಳಿದರು.
ಸಮತಾ ಶಾಲೆಯ ಅಧ್ಯಕ್ಷ ಶಂಕರ ಬಾಗೇವಾಡಿ, ಶಿವಯೋಗಿ ಶಾಲೆಯ ಅಧ್ಯಕ್ಷ ಅಶೋಕ ಧರಿಗೌಡರ, ಸಂಕಲ್ಪ ಫೌಂಡೇಶನ್ ಅಧ್ಯಕ್ಷ ನಾನಾಗೌಡ ಬಿರಾದಾರ ಅಭಿನಂದನೆ ಸಲ್ಲಿಸಿದರು. ಆಟೋನಗರ ಪ್ಲಾಸ್ಟಿಕ್ ಅಸೋಸಿಯೇಷನ್ ಪದಾಧಿಕಾರಿಗಳಾದ ಜಾವಿದ್ ಮುಲ್ಲಾ, ಖಮರುದ್ದಿನ್ ಸೌದಾಗರ ಹಾಗೂ ಮುಕ್ತಾರ ಪಠಾಣ ಮತ್ತಿತರರು ಉಪಸ್ಥಿತರಿದ್ದರು.