Select Page

ಶತಮಾನದ ಶಾಲೆಗೆ ಜೀವಕಳೆ ನೀಡಿದ ಯುವ ಬ್ರಿಗೇಡ್

ಶತಮಾನದ ಶಾಲೆಗೆ ಜೀವಕಳೆ ನೀಡಿದ ಯುವ ಬ್ರಿಗೇಡ್

ಸ.17 ಕ್ಕೆ ಕಲ್ಲೋಳಿ ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲ ಉದ್ಘಾಟನೆ

ಮೂಡಲಗಿ : 1855 ರಲ್ಲಿ ಪರಪ್ಪಗೌಡ ಪಾಟೀಲ್ ಎಂಬುವವರ ದೂರದೃಷ್ಟಿಯಿಂದ ಉದ್ಘಾಟನೆಯಾದ ಕಲ್ಲೋಳಿ ಸರ್ಕಾರಿ ಶಾಲೆ ಆರಂಭವಾಗಿ 137 ವರ್ಷ ಕಳೆದಿವೆ. ಇಂತಹ ಮಹತ್ವದ ಸನ್ನಿವೇಶದಲ್ಲಿ ಸರ್ಕಾರಿ ಶಾಲೆ ಉಳಿಸುವ ಅಭಿಯಾನಕ್ಕೆ ಯುವ ಬ್ರಿಗೇಡ್ ಸಂಕಷ್ಟ ತೊಟ್ಟಿದ್ದು ಶಾಲೆಯ ಜೀರ್ಣೊದ್ಧಾರ ಹಾಗೂ ವಿಜ್ಞಾನ ಪ್ರಯೋಗಾಲಯ ನಿರ್ಮಿಸಿದ್ದು ಇದರ ಉದ್ಘಾಟನೆ ಕಾರ್ಯಕ್ರಮ ಬರುವ ಸಪ್ಟೆಂಬರ್ 17 ರಂದು ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಬರಲಿದ್ದು ದಿವ್ಯ ಸಾನಿಧ್ಯವನ್ನು ನಿಡಸೋಸಿ ಜಗದ್ಗುರು ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ವಹಿಸಲಿದ್ದಾರೆ. ಇನ್ನೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆಗಮಿಸಲಿದ್ದಾರೆ.

ಶತಮಾನದ ಶಾಲೆ ಅಭಿವೃದ್ಧಿಗೆ ಸಂಕಲ್ಪ ತೊಟ್ಟ ಯುವ ಬ್ರಿಗೇಡ್ ಸಂಘಟನೆ. ಶಾಲೆಯ ಮೇಲ್ಚಾವಣಿ, ವಿದ್ಯಾರ್ಥಿಗಳಿಗೆ ಸುಸಜ್ಜಿತ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ವಿಜ್ಞಾನ ಪ್ರಯೋಗಾಲಯವನ್ನು ಗ್ರಾಮದ ನಾಗರಿಕರ ಸಹಕಾರದಿಂದ ಅಭಿವೃದ್ಧಿಪಡಿಸಿದ್ದು ಇದರ ಉಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!