Select Page

ಮೆಂಟಲ್ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೆ : ಡಿಕೆಶಿ

ಮೆಂಟಲ್ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೆ : ಡಿಕೆಶಿ

ಬೆಳಗಾವಿ‌ : ಮೆಂಟಲ್ ಯತ್ನಾಳ ಮೇಲೆ‌ ಒಂದು ಕೋಟಿ‌ ರೂ. ದಂಡ ಕಟ್ಟಿ 200 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿಕೆ‌ ಮಾಡಿದ್ದೆ ಎಂದು  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದರು.

ಶುಕ್ರವಾರ ಕಾಂಗ್ರೆಸ್ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಯತ್ನಾಳ ಮುಖ್ಯಮಂತ್ರಿ ಆದರೆ ಡಿ.ಕೆ.ಶಿವಕುಮಾರ ಅಕ್ರಮ ಆಸ್ತಿಯನ್ನು ಜೆಸಿಬಿಯಿಂದ ನೆಲ ಸಮ ಮಾಡುತ್ತಾರಂತೆ ಎಂಬ ಮಾಧ್ಯಮವರ ಪ್ರಶ್ನೆಗೆ ಉತ್ತರಿಸಿದ ಅವರು, ಯತ್ನಾಳ ಮುಖ್ಯಮಂತ್ರಿ ಆಗುವವರೆಗೂ ಕಾಯೋದು ಬೇಡಾ. ನಿಮ್ಮದೆ ಸರಕಾರ ಇದೆ ಮಾಡಿ ತೋರಿಸಲಿ ಎಂದು ಸವಾಲ್ ಹಾಕಿದರು.

ರಾಜ್ಯದಲ್ಲಿನ ಆಡಳಿತ ಶಿಕ್ಷಕರ ಆಯ್ಕೆ, ಪಿಎಸ್ ಐ ನೇಮಕ ದಲ್ಲಿ ನಡೆದ ಭ್ರಷ್ಟಾಚಾರ ನಡೆಯುತ್ತಿದೆ.  ರಾಜ್ಯದಲ್ಲಿ ಈಗ ಎಲ್ಲದರಲ್ಲೂ ಬೆಲೆ ನಿಗದಿಯಾಗಿದೆ.ಇದು ಎಲ್ಲಿಗೆ ಹೋಗಿದೆ ಎಂದರೆ ಮುಖ್ಯಮಂತ್ರಿ ಹಾಗೂ ಸಚಿವರಾಗಲು ಹಣ ನೀಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿರುವುದು ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದರು.

ಮಾಜಿ ಕೇಂದ್ರ ಸಚಿವ, ಬಿಜೆಪಿಯ ಹಿರಿಯ ನಾಯಕ ಯತ್ನಾಳ ಅವರು ಮುಖ್ಯಮಂತ್ರಿಯಾಗಲು 2,500 ಕೋಟಿ ರೂ. ಅಂಥ ಹೇಳಿದ್ದಾರೆ. ಇದಕ್ಕೆ ಇಡಿ, ಐಟಿ ಯವರು ತನಿಖೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಅಪೆಕ್ಸ್ ಬ್ಯಾಂಕ್ ನವರು ಡಿಸಿಗೆ ಪತ್ರ ಬರೆದಿದ್ದಾರೆ. ಮಾಜಿ ಸಚಿವರು ಕೋಟ್ಯಂತರ ರೂ. ನೀಡಬೇಕೆಂದು ತಿಳಿಸಿದರೂ ಸಹಕಾರ ಸಚಿವರು, ಮುಖ್ಯಮಂತ್ರಿಗಳು ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದ ಅವರು ಸರಕಾರ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಕೂಡಲೇ ಮುಖ್ಯಮಂತ್ರಿ ಹಾಗೂ ಸಹಕಾರ ಸಚಿವರು ಉತ್ತರ ಕೊಡಬೇಕು. ಕೂಡಲೇ ಅವರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಬೇಕು. ಅಧಿಕಾರಿಗಳು ಸಹಕಾರ ಮಾಡಿದ್ದಾರೋ ಅಂಥವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸರಕಾರಕ್ಕೆ ಒತ್ತಾಯಿಸುತ್ತೇನೆ. ರೈತರಿಗೆ ಹಣ ಕೊಡಿಸಬೇಕು. ಸೌಭಾಗ್ಯ ಸಕ್ಕರೆ ಕಾರ್ಖಾನೆಯ ಮೇಲೆ ರಕ್ಷಣೆ ನೀಡಿದರೆ ನಮ್ಮ‌ ಹೋರಾಟ ಮುಂದುವರೆಯುತ್ತದೆ ಎಂದು ಪರೋಕ್ಷವಾಗಿ ಮಾಜಿ ಸಚಿವ ರಮೇಶ ಜಾರಕಿಹೊಳಿಗೆ ಪ್ರತ್ಯುತ್ತರ ನೀಡಿದರು.

ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ನಗರಾಧ್ಯಕ್ಷ ರಾಜು ಸೇಠ್, ಶಾಸಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ‌ ಚನ್ನರಾಜ ಹಟ್ಟಿಹೊಳಿ,ಮಾಜಿ ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಶಾಸಕ ಫಿರೋಜ್ ಸೇಠ್, ಲಕ್ಷ್ಮಣ ರಾವ್ ಚಿಂಗಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *