ಶ್ರೀಗಳಿಗೆ ಅಪಮಾನ : ಅಥಣಿ ಕಾಂಗ್ರೆಸ್ ಮುಖಂಡ ಮಂಗಸೂಳಿ ವಿರುದ್ಧ ಆಕ್ರೋಶ
ಬೆಳಗಾವಿ : ಸಂತ ಪರಂಪರೆಗೆ ಗೌರವ ಕೊಡುವ ನಾಡಿನಲ್ಲಿ ಕಾವಿ ತೊಟ್ಟ ಶ್ರೀಗಳಿಗೆ ಕಾಂಗ್ರೆಸ್ ಮುಖಂಡ ಅಗೌರವ ತೋರಿದ ಘಟನೆ ನಡೆದಿದೆ.
ಅಥಣಿ ಮುರುಘೇಂದ್ರ ಶಿವಯೋಗಿಗಳ ಜನ್ಮಸ್ಥಳ ನದಿ ಇಂಗಳಗಾಂವಿ ಗುರುಲಿಂಗದೇವರ ಮಠದ ಪೂಜ್ಯರಿಗೆ ಅಥಣಿ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಒಬ್ಬರು ಚಪ್ಪಲಿ ಹಾಕಿ ಸನ್ಮಾನ ಮಾಡಿದ್ದ ಪೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಪ್ರಮಾದ ಎಸಗಿದ್ದು, ಲಕ್ಷಾಂತರ ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ. ಈ ಕುರಿತು ಸ್ಥಳೀಯ ಯುವಕರು ತಮ್ಮ ಆಕ್ರೋಶ ಹೊರಹಾಕಿದ್ದು, ಶ್ರೀಗಳ ಕ್ಷಮೆಗೆ ಆಗ್ಯಹಿಸಿದ್ದಾರೆ.