Election : ರಂಗೇರಿದ ಮತದಾನ – ಮತ ಚಲಾಯಿಸಿದ ಸಚಿನ್ ತೆಂಡೂಲ್ಕರ್ ಕುಟುಂಬ
ಮಹಾರಾಷ್ಟ್ರದಲ್ಲಿ ಎಲ್ಲಾ 288 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ಬೆಳಗ್ಗೆ 7 ರಿಂದ ಆರಂಭವಾಗಿದ್ದು, ಬೆಳಗ್ಗೆಯಿಂದಲೆ ಪ್ರಭಾವಿಗಳಾದ ನಟ ಅಕ್ಷಯ್ ಕುಮಾರ್, ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್, ನಟ ರಾಜ್ ಕುಮಾರ್ ರಾವ್ ಸೇರಿದಂತೆ ಹಲವಾರು ಜನ ಮತಚಲಾಯಿಸಿದ್ದಾರೆ.
ಬಾಲಿವುಡ್‌ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರು ಕೆನಡಾ ಪೌರತ್ವ ಹೊಂದಿದ್ದರು.. ಇದೀಗ ಅವರು ಸಿಎಎ ಅಡಿಯಲ್ಲಿ ಭಾರತದ ಪೌರತ್ವ ಪಡೆದಿದ್ದಾರೆ.. ಭಾರತದ ಪೌರತ್ವ ಪಡೆದ ಮೇಲೆ ಅವರು ಎರಡನೇ ಬಾರಿಗೆ ಮುಂಬೈನಲ್ಲಿ ಮತ ಚಲಾವಣೆ ಮಾಡಿದ್ದಾರೆ.. ಇದಕ್ಕೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ..
ಇಲ್ಲಿನ ವ್ಯವಸ್ಥೆ ಬಹಳ ಚೆನ್ನಾಗಿದೆ. ಶಾಂತಿ ಸುವ್ಯವಸ್ಥೆಯಿಂದ ಮತದಾನ ನಡೆಯುತ್ತಿದೆ. ಎಲ್ಲರೂ ಮನೆಯಿಂದ ಆಚೆ ಬಂದು ದಯವಿಟ್ಟು ಮತದಾನ ಮಾಡಿ ನಿಮ್ಮ ಒಂದು ಮತ ಸಂಪೂರ್ಣ ವ್ಯವಸ್ಥೆಯನ್ನೇ ಬದಲಾಯಿಸಬಲ್ಲ ಎಂದು ನಟ ಅಕ್ಷಯ್ ಕುಮಾರ್ ಹೇಳಿದರು.
ಇನ್ನು ಪ್ರಭಾವಿಗಳಾದ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್, ನಟ ರಾಜ್ ಕುಮಾರ್ ರಾವ್, ನಿರ್ದೇಶಕ ಕಬೀರ್ ಖಾನ್, ನಿರ್ದೇಶಕಿ ಜೋಯಾ ಅಖ್ತರ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ನಟ ಅಲಿ ಫಜಲ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವಾರು ಜನ ಮತ ಚಲಾವಣೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರಜಾಪ್ರಭುತ್ವದಲ್ಲಿ, ಮತದಾನವು ನಾಗರಿಕನ ಕರ್ತವ್ಯವಾಗಿದೆ, ಪ್ರತಿಯೊಬ್ಬ ನಾಗರಿಕನು ಈ ಕರ್ತವ್ಯವನ್ನು ನಿರ್ವಹಿಸಬೇಕು. ನಾನು ಉತ್ತರಾಂಚಲದಲ್ಲಿದ್ದೆ, ಮತ ಚಲಾಯಿಸಲೆಂದೆ ನಿನ್ನೆ ರಾತ್ರಿ ಇಲ್ಲಿಗೆ ಬಂದಿದ್ದೇನೆ. ಎಲ್ಲರೂ ಮತ ಚಲಾಯಿಸಬೇಕು ಎಂದರು
ಮತ ಚಲಾಯಿಸಿದ ಬಳಿಕ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮಾತನಾಡಿದ್ದು, ನಾನು ಕೆಲವು ಸಮಯದಿಂದ ಭಾರತೀಯ ಚುನಾವಣಾ ಆಯೋಗ ಐಕಾನ್ ಆಗಿದ್ದೇನೆ, ನಾನು ನೀಡುತ್ತಿರುವ ಸಂದೇಶವೆಂದರೆ ಮತ ಚಲಾಯಿಸುವುದು. ಇದು ನಮ್ಮ ಜವಾಬ್ದಾರಿ. ನಾನು. ಎಲ್ಲರೂ ಹೊರಗೆ ಬಂದು ಮತ ಚಲಾಯಿಸುವಂತೆ ಒತ್ತಾಯಿಸಿದರು.

