ವರಕವಿ ದ.ರಾ ಬೇಂದ್ರೆ ಸೊಸೆ ಪದ್ಮಾ ನಿಧನ
ಧಾರವಾಡ : ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಯವರ ಸೊಸೆ ನಿಧನರಾಗಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ನಿಧನರಾದ ಪದ್ಮಾ ಪಾಂಡುರಂಗ ಬೇಂದ್ರೆ (90 ಧಾರವಾಡ ಸಾಧನಕೇರಿಯ ದ.ರಾ ಬೇಂದ್ರೆ ಮನೆಯಲ್ಲಿ ವಾಸವಿದ್ದರು.
ಪದ್ಮಾ ಬೇಂದ್ರೆ ಅವರು ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗ ಅಗಲಿದ್ದಾರೆ. ಧಾರವಾಡ ಹೊಸ ಯಲ್ಲಾಪೂರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಸದಸ್ಯರು ತೀರ್ಮಾನಿಸಿದ್ದಾರೆ.