Video-ಗಡಿಯಲ್ಲಿ ಎಂಇಎಸ್ ಪುಂಡಾಟ : ಕರ್ನಾಟಕದ ಬಸ್ಸಿಗೆ ಕಪ್ಪು ಮಸಿ
ಬೆಳಗಾವಿ : ಬೂದಿ ಮುಚ್ಚಿದ ಕೆಂಡದಂತಿದ್ದ ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದಕ್ಕೆ ಮಹಾರಾಷ್ಟ್ರ ರಾಜಕಾರಣಿಗಳು ಮತ್ತೊಮ್ಮೆ ತುಪ್ಪ ಸವರಿದ್ದು, ಗಡಿಯಲ್ಲಿ ಎಂಇಎಸ್ ಪುಂಡಾಟಕ್ಕೆ ಅವಕಾಶ ಕಲ್ಪಿಸಿದಂತಾಗಿದೆ.
ಹೌದು ಕರ್ನಾಟಕ ಗಡಿ ಭಾಗದ ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ವಾದ ಮುಂದಿಟ್ಟುಕೊಂಡು ವಿನಾಕಾರಣ ಜಗಳಕ್ಕೆ ನಿಂತ ಮಹಾರಾಷ್ಟ್ರದ ರಾಜಕಾರಣಿಗಳಿಗೆ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಸರಿಯಾದ ರೀತಿಯಲ್ಲಿ ಪ್ರತ್ಯುತ್ತರ ನೀಡಿದ್ದರು.
ಇದೇ ಮೊದಲಬಾರಿಗೆ ರಾಜ್ಯದ ಮುಖ್ಯಮಂತ್ರಿ ಮಹಾರಾಷ್ಟ್ರದ ಹಲವು ಪ್ರದೇಶಗಳು ಕರ್ನಾಟಕಕ್ಕೆ ಸೇರಿಸಿಕೊಳ್ಳಬೇಕೆಂಬ ವಾದ ಮುಂದಿಟ್ಟಿದ್ದರು. ಸಿಎಂ ಕೊಟ್ಟ ಬಾರಿ ಹೊಡೆತಕ್ಕೆ ಎಂಇಎಸ್ ಈವರೆಗೂ ಚೇತರಿಸಿಕೊಂಡಂತೆ ಕಾಣುತ್ತಿಲ್ಲ. ಸದ್ಯ ಗಡಿಯಲ್ಲಿ ಪುಂಡಾಟ ಮುಂದುವರಿಸಿದ್ದು ಕರ್ನಾಟಕದ ಸಾರಿಗೆ ಬಸ್ ಗಳಿಗೆ ಕಪ್ಪು ಮಸಿ ಬಳಿಯುವ ಕೆಲಸ ಮಾಡಿದ್ದಾರೆ.
ಅಖಿಲ ಭಾರತೀಯ ಮರಾಠಾ ಸಂಘಟನೆ ಸದಸ್ಯರು ಮಹಾರಾಷ್ಟ್ರ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮದಲ್ಲಿ ರಾಜ್ಯದ ನಿಪ್ಪಾಣಿಗೆ ಸೇರಿದ್ದ ಕೆಎಸ್ಆರ್ಟಿಸಿ ಬಸ್ ಗೆ ಮಸಿ ಬಳಿದು ಪುಂಡಾಟ ಮೆರೆದಿದ್ದಾರೆ.