
ಏನಾದ್ರು ಸಮಸ್ಯೆ ಇದ್ದರೆ ಎಸ್ಪಿ ಸಾಹೇಬ್ರಗೆ ಫೋನ್ ಮಾಡ್ರಿ : 26 ಕ್ಕೆ ಸಾರ್ವಜನಿಕರ ಕುಂದುಕೊರತೆ ಆಲಿಸಲಿರುವ ಡಾ. ಸಂಜೀವ್ ಪಾಟೀಲ್

ಬೆಳಗಾವಿ : ಪೊಲೀಸರು ಅಂದ್ರೆ ಮಾರುದ್ದ ಜಿಗಿಯುವ ಜನರು, ಅದೆಷ್ಟೋ ವರ್ಷಗಳಿಂದ ಅನುಭವಿಸುವ ಸಮಸ್ಯೆಗಳನ್ನು ಯಾರೊಂದಿಗೂ ಹೇಳಿಕೊಳ್ಳದೆ ಕೊರಗುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರ ನೀಡಲು ನಮ್ಮ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಶನಿವಾರ 26 ರಂದು ತಮ್ಮ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಲು ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದ್ದಾರೆ. ಕರೆ ಮಾಡುವ ಸಂಖ್ಯೆ – 0831-2405226

ಕರೆ ಮಾಡುವ ಸಂಖ್ಯೆ – 0831-2405226. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಖುದ್ದಾಗಿ ತಮ್ಮ ಕರೆಗಳನ್ನು ಸ್ವೀಕರಿಸಿ ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ. ಅಕ್ರಮ ಮಧ್ಯ ಮಾರಾಟ, ಸಂಚಾರ ಸುವ್ಯವಸ್ಥೆ, ಪ್ರತಿನಿತ್ಯ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಡಾ. ಸಂಜೀವ್ ಪಾಟೀಲ್ ಅವರ ಜೊತೆ ಹಂಚಿಕೊಳ್ಳಬಹುದು.