Select Page

ಕಿತ್ತೂರು ತಹಶಿಲ್ದಾರ ಲೋಕಾಯುಕ್ತ ಬಲೆಗೆ : ಲಂಚ ಪಡೆಯುತ್ತಿದ್ದಾಗ ಲಾಕ್ ಆದ ಹಾಲಗಿ

ಕಿತ್ತೂರು ತಹಶಿಲ್ದಾರ ಲೋಕಾಯುಕ್ತ ಬಲೆಗೆ : ಲಂಚ ಪಡೆಯುತ್ತಿದ್ದಾಗ ಲಾಕ್ ಆದ ಹಾಲಗಿ

ಕಿತ್ತೂರು : ಪಹಣಿ ಪತ್ರದಲ್ಲಿ ಖಾತಾ ಬದಲಾವಣೆ ಮಾಡಲು ಬೇಡಿಕೆ ಇಟ್ಟಿದ್ದ 5 ಲಕ್ಷ ರೂ ಹಾಗೂ 20 ಲಕ್ಷ ರೂ ಮೌಲ್ಯದ ಖಾಲಿ ಚಕ್ ಪಡೆಯುವ ಸಂದರ್ಭದಲ್ಲಿ ಕಿತ್ತೂರು ತಹಶಿಲ್ದಾರ ಸೋಮಲಿಂಗಪ್ಪ ಹಾಲಗಿ ಮತ್ತು ಭೂ ಸುಧಾರಣಾ ವಿಷಯಗಳ ನಿರ್ವಾಹಕ ಪ್ರಸನ್ನ ಜಿ ಎಂಬುವವರು ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

10 ಎಕರೆ ಜಮೀನಿನ ಪಹಣಿ ಪತ್ರದಲ್ಲಿ ಖಾತಾ ಬದಲಾವಣೆ ಮಾಡಲು ಹಣದ ಬೇಡಿಕೆ ಇಟ್ಟ ಆರೋಪದಲ್ಲಿ ನವೆಂಬರ್ 24 ರಂದು ಬೆಳಗಾವಿ ಲೋಕಾಯುಕ್ತ ಠಾಣೆಯಲ್ಲಿ ಪ್ತಕರಣ ದಾಖಲಾಗಿತ್ತು. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಸೂಚನೆಯಂತೆ, ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಯಶೋಧಾ ವಂಟಗೋಡಿ ಅವರ ಮಾರ್ಗದಲ್ಲಿ ನಡೆದ ದಾಳಿಯಲ್ಲಿ ಆರೋಪಿತರು 5 ಲಕ್ಷ ರೂ ಹಾಗೂ 20 ಲಕ್ಷ ರೂ ಮೌಲ್ಯದ ಖಾಲಿ ಚಕ್ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Advertisement

Leave a reply

Your email address will not be published. Required fields are marked *