ಸಚಿವೆ ಹೆಬ್ಬಾಳ್ಕರ್ ಗೆ ರಾಮಮಂದಿರ ಉದ್ಘಾಟನೆ ಆಹ್ವಾನ ನೀಡಿಲ್ಲ – ವಿಹೆಚ್ ಪಿ ಸ್ಪಷ್ಟನೆ
ಬೆಳಗಾವಿ:ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಿಲ್ಲ ಎಂದು ವಿಚ್ ಪಿ ಸ್ಪಷ್ಟನೆ ನೀಡಿದೆ. ಅವರಿಗೆ ಕೇವಲ ಭೇಟಿಗಷ್ಟೇ ಆಹ್ವಾನ ನೀಡಿದ್ದೇವೆ ಎಂದು ವಿಎಚ್ ಪಿ ತಿಳಿಸಿದೆ.
ಕಾಂಗ್ರೆಸ್ ನಾಯಕರಿಗೆ ಉದ್ಘಾಟನೆಗೆ ಆಹ್ವಾನ ನೀಡಿರಲಿಲ್ಲ.ಈ ಟೀಕೆ ಬೆನ್ನಲ್ಲೇ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಆಹ್ವಾನ ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು.ವಿಶ್ವ ಹಿಂದೂ ಪರಿಷತ್ ಮುಖಂಡ ಪರಮೇಶ್ವರ್ ಹೆಗ್ಗಡೆ ಮಾತನಾಡಿ ‘ಲಕ್ಷ್ಮೀ ಹೆಬ್ಬಾಳ್ಕರ್ ರವರು ರಾಮ ಮಂದಿರಕ್ಕೆ ಎರಡು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.ರಾಮ ಮಂದಿರಕ್ಕೆ ಒಮ್ಮೆಯಾದರೂ ಭೇಟಿ ನೀಡಿ ಎಂದು ಆಹ್ವಾನ ನೀಡಲಾಗಿದೆ.
ರಾಮ ಮಂದಿರಕ್ಕೆ ಭೇಟಿ ಕೊಡಿ ಅಂತಾ ಅಕ್ಷತಾ ಅಭಿಯಾನ ಆಮಂತ್ರಣ ನೀಡಿದ್ದೇವೆ.ಸಾಮಾನ್ಯರಿಂದ ಹಿಡಿದು ಎಲ್ಲರಿಗೂ ಆಹ್ವಾನ ನೀಡಿದ್ದೇವೆ.ಅದರಂತೆ ಅವರಿಗೂ ಕೂಡ ರಾಮಮಂದಿರ ಭೇಟಿಗೆ ಆಹ್ವಾನ ನೀಡಿದ್ದೇವೆ” ಎಂದರು.