
ನಿಯತಿ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಬೆಳಗಾವಿ : ನಗರದ ಹೊಟೆಲ್ ಮಧುಬನ್ ಸಭಾಂಗಣದಲ್ಲಿ
ನಿಯತಿ ಸಹಕಾರ ಸಂಘ ಲಿಮಿಟೆಡ್. ವಾರ್ಷಿಕ ಸಾಮಾನ್ಯ ಸಭೆ ಆಯೋಜನೆ ಮಾಡಲಾಗಿತ್ತು.
ಸಂಸ್ಥೆಯ ಅಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಉದ್ಯಮಿ ಹಾಗೂ ಲೇಖಕರಾದ ಶ್ರೀ ಆನಂದ್ ಗೋಗಟೆ ಗೌರವ ಅತಿಥಿಯಾಗಿದ್ದರು.
ಎಲ್ಲಾ ನಿರ್ದೇಶಕರು ಮತ್ತು ಗೌರವ ಅತಿಥಿಗಳಿಂದ ದೀಪ ಬೆಳಗಿಸುವ ಮೂಲಕ ಸಭೆ ಪ್ರಾರಂಭವಾಯಿತು.
ವರದಾ ಹಪ್ಪಳಿ ಸ್ವಾಗತ ಭಾಷಣ ಮಾಡಿದರು. ಸಂಸ್ಥೆಯ ಅಧ್ಯಕ್ಷೆ ಡಾ. ಸೊನಾಲಿ ಸರ್ನೋಬತ್ ಮುಂಬರುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ನಿರ್ದೇಶಕ ಗಜಾನನ ರಾಮನಕಟ್ಟಿ ಆಯವ್ಯಯ ಪತ್ರ ಓದಿದರು. ಲಾಭ ಮತ್ತು ನಷ್ಟದ ಖಾತೆಯನ್ನು ಹಿರಿಯ ವ್ಯವಸ್ಥಾಪಕಿ ಶ್ರೀಮತಿ ಅನುಷಾ ಜೋಶಿ ಅವರು ಹಂಚಿಕೊಂಡಿದ್ದಾರೆ. 2024-25 ರ ಆರ್ಥಿಕ ವರ್ಷದ ಬಜೆಟ್ ಅನ್ನು ವ್ಯವಸ್ಥಾಪಕಿ ಶ್ರೀಮತಿ ದೀಪಾ ಪ್ರಭುದೇಸಾಯಿ ಅವರು ಅಂದಾಜಿಸಿದ್ದಾರೆ.
ಹಿರಿಯ ಸಲಹೆಗಾರ ವಿಜಯ ಮೋರೆ ಮತ್ತು ರುದ್ರಗೌಡ ಪಾಟೀಲ್ ಅವರು ಸಂಸ್ಥೆಯ ಭವಿಷ್ಯದ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಉಪಾಧ್ಯಕ್ಷ ಭರತ್ ರಾಥೋಡ್, ನಿರ್ದೇಶಕರಾದ ಡಾ.ಸಮೀರ್ ಸರ್ನೋಬತ್, ರೋಹಿತ್ ದೇಶಪಾಂಡೆ, ಪ್ರಕಾಶ್ ಮುಗಳಿ, ಪ್ರಸಾದ್ ಘಾಡಿ, ಅನುಪ್ ಜವಾಲ್ಕರ್ ಉಪಸ್ಥಿತರಿದ್ದರು. ನಿರ್ದೇಶಕರಾದ ಶ್ರೀ ಭೂಷಣ್ ರೇವಣಕರ್ ಧನ್ಯವಾದ ಅರ್ಪಿಸಿದರು.
ಸೂತ್ರಸಂಚಲನವನ್ನು ಕಿಶೋರ ಕಾಕಡೆ ಮಾಡಿದರು.