Select Page

ಚದುರಂಗದಾಟದಲ್ಲಿ ಕೊನೆಗೂ ಗೆದ್ದ ಲಕ್ಷ್ಮಣ ಸವದಿ ಬಣ

ಚದುರಂಗದಾಟದಲ್ಲಿ ಕೊನೆಗೂ ಗೆದ್ದ ಲಕ್ಷ್ಮಣ ಸವದಿ ಬಣ

ಅಥಣಿ‌ : ರಾಜ್ಯದಲ್ಲಿಯೇ ಅತೀ ದೊಡ್ಡ ಗ್ರಾಮ ಪಂಚಾಯತಿ
ಹೆಗ್ಗಳಿಕೆ ಪಡೆದಿರುವ ಸಂಕೋನಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದ ಚುನಾವಣೆ ನಡೆದಿದ್ದು, ಲಕ್ಷ್ಮಣ ಸವದಿ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ.

ಈ‌ ಹಿಂದೆ ಸಂಕೋನಟ್ಟಿ ಗ್ರಾಮ ಪಂಚಾಯತಿ ಅಧಿಕಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಆಪ್ತರು ಅಧಿಕಾರದಲ್ಲಿದ್ದರು.‌ ಕಳೆದ ಕೆಲ ದಿನಗಳ ಹಿಂದೆ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಮಾಜಿ ಅಧ್ಯಕ್ಷ
ಸಂತೋಷ ಕಕಮರಿ ಅವಿಶ್ವಾಸ ನಿರ್ಣಯದಲ್ಲಿ ಸೋಲು ಅನುಭವಿಸುವಂತಾಗಿತ್ತು.‌

ಇಂದು‌ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಬೆಂಬಲಿಗ ಶಂಕರ ರಾಮು ಗಡದೆ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿಗ ನಿಕಟ ಪೂರ್ವ ಅಧ್ಯಕ್ಷ ಸಂತೋಷ ಕಕಮರಿ ನಾಮಪತ್ರ ಸಲ್ಲಿಸಿದ್ದರು. ಈ ಚುನಾವಣೆಯಲ್ಲಿ ಭಾಗವಹಿಸಿದ್ದ 53 ಸದಸ್ಯರಲ್ಲಿ ಜಯ ಸಾಧಿಸಿದ ಶಂಕರ ಗಡದೆ ಇವರಿಗೆ 43 ಮತಗಳು ಹಾಗೂ ಪರಾಭವಗೊಂಡ ಸಂತೋಷ ಕಕಮರಿ ಇವರಿಗೆ 10 ಮತಗಳು ಬಂದ ಪರಿಣಾಮ ಶಂಕರ ಗಡದೆ 33 ಮತಗಳಿಂದ ಆಯ್ಕೆಯಾದರು.

ಚುನಾವಣಾ ಅಧಿಕಾರಿಯಾಗಿದ್ದ ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ , ಸಹಾಯಕ ಅಧಿಕಾರಿ ಗುರುನಾಥ ಸ್ವಾಮಿ, ಅಭಿವೃದ್ಧಿ ಅಧಿಕಾರಿ ಬೀರಪ್ಪ ಕೊಡಗಂಚಿ ನೂತನ ಅಧ್ಯಕ್ಷರಿಗೆ ಆದೇಶ ಪತ್ರ ನೀಡಿ ಅಭಿನಂದಿಸಿದರು.

Advertisement

Leave a reply

Your email address will not be published. Required fields are marked *

error: Content is protected !!