ಸಿದ್ದರಾಮೋತ್ಸವಕ್ಕೆ ಬೆಳಗಾವಿಯಿಂದ 3 ಕಿ.ಮೀ. ಉದ್ದದ ಫೋಟೋ ಬಯೊಗ್ರಫಿ
ಬೆಳಗಾವಿ- ಬುಧವಾರ ದಾವಣಗೆರೆಯಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಜನ್ಮ ದಿನದ ಸಂದರ್ಭದಲ್ಲಿ ಪ್ರದರ್ಶಿಸಲು ಬೆಳಗಾವಿಯಲ್ಲಿ 3000 ಮೀಟರ್ (3 ಕಿಮೀ) ಉದ್ದದ ಫೋಟೋ ಬಯೋಗ್ರಫಿ ಸಿದ್ಧವಾಗಿದೆ.
ಸವದತ್ತಿಯ ಸೌರಭ್ ಚೋಪ್ರಾ ಮಾರ್ಗದರ್ಶನದಲ್ಲಿ, ಆನಂದ ಚೋಪ್ರಾ ಅಭಿಮಾನಿ ಬಳಗ ಸಿದ್ದರಾಮಯ್ಯನವರ ರಾಜಕೀಯ ಜೀವನದ ಫೋಟೋಗಳನ್ನು ಬಳಸಿ ಈ ಫೋಟೋ ಬಯೋಗ್ರಫಿ ತಯಾರಿಸಿದೆ. ಸುಮಾರು 500 ಫೋಟೋಗಳನ್ನು ಬಳಸಿ ಈ ಫೋಟೋ ಬಯೋಗ್ರಫಿ ತಯಾರಿಸಲಾಗಿದೆ. ಇದಕ್ಕಾಗಿ 3 ಸಾವಿರ ಮೀಟರ್ ಉದ್ದದ ಬಟ್ಟೆ ಬಳಸಲಾಗಿದೆ.
ಸವದತ್ತಿಯ ಕಾಂಗ್ರೇಸ್ ಪಕ್ಷದ ಮುಖಂಡರಾಗಿದ್ದ ದಿ.ಆನಂದ ಚೋಪ್ರಾ ಅವರ ಪುತ್ರ ಸೌರಭ ಆನಂದ ಚೋಪ್ರಾ ಅವರು ಸಿದ್ದರಾಮಯ್ಯನವರು ನಡೆದು ಬಂದ ದಾರಿ ಹಾಗೂ ಅವರ ಜೀವನ ಚರಿತ್ರೆ ಬಿಂಬಿಸುವ ಈ ವಿಶಿಷ್ಟ ಪ್ರಯತ್ನ ಮಾಡಿದ್ದಾರೆ. ಗುರು ಬಿಗ್ ಬಿ ಆರ್ಟ್ಸ್ ಡಿಸೈನ್ ನ ಮೌನೇಶ ಬಡಿಗೇರ್ ಡಿಸೈನ್ ಮಾಡಿದ್ದು, ಸೂರತ್ ನಲ್ಲಿ ಮುದ್ರಿಸಲಾಗಿದೆ. ಇದಕ್ಕಾಗಿ ಸುಮಾರು 8 ಲಕ್ಷ ರೂ. ವೆಚ್ಚ ಮಾಡಲಾಗಿದೆ.
ಆನಂದ ಛೋಪ್ರ ಅಭಿಮಾನಿ ಬಳಗ ಮತ್ತು ಎನ್ ಕರೇಜ್ ಗ್ರುಪ್ ಇದಕ್ಕಾಗಿ 15 ಶ್ರಮಿಸಿದೆ. ಮೊದಲು ಇಚಲಕರಂಜಿಗೆ ತೆರಳಿ ಶಾಮಿಯಾನಾ ಬಟ್ಟೆ ತಯಾರಿಸುವವರ ಬಳಿ ವಿಚಾರಿಸಲಾಗಿದೆ. ಆದರೆ ಅವರಿಂದ ಸೂಕ್ತವಾದ ಬಟ್ಟೆ ಸಿಗದಿದ್ದಾಗ ಅವರೇ ಸಲಹೆ ನೀಡಿದಂತೆ ಸೂರತ್ ಸಂಪರ್ಕಿಸಲಾಗಿದೆ. ಅಲ್ಲಿ ಬೇಕಾದ ಬಟ್ಟೆ ಮತ್ತು ಮುದ್ರಣ ವ್ಯವಸ್ಥೆ ಎರಡೂ ಆಯಿತು.
3000 ಮೀಟರ್ ಉದ್ದ ಮತ್ತು 6.5 ಮೀಟರ್ ಅಗಲದ ವಿಶೇಷ ಬಟ್ಟೆಯನ್ನು ಇದಕ್ಕಾಗಿ ಬಳಸಲಾಗಿದೆ.
ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ವೇದಿಕೆಯಿಂದ 3 ಕಿಮೀ ದೂರದಲ್ಲಿ ಈ ಆಟೋ ಬಯೋಗ್ರಫಿ ರೋಲನ್ನು ಉದ್ಘಾಟಿಸಲಿದ್ದಾರೆ. ಅಲ್ಲಿಂದ ವೇದಿಕೆಯವರೆಗೂ ರೋಲನ್ನು ಬಿಡಿಸಿಕೊಂಡು ಬರಲಾಗುತ್ತದೆ.
ಒಟ್ಟಾರೆ, ಈ ಆಟೋಬಯೋಗ್ರಫಿ ಸಿದ್ದರಾಮಯ್ಯನವರ ಜೀವನದ ಅಮೃತ ಮಹೋತ್ಸವಕ್ಕೆ ವಿಶಿಷ್ಟ ಕೊಡುಗೆಯಾಗಲಿದ್ದು, ಹೊಸ ದಾಖಲೆಯನ್ನೇ ನಿರ್ಮಿಸುವ ಸಾಧ್ಯತೆ ಇದೆ.
ಸಿದ್ದರಾಮಯ್ಯನವರ ಮೇಲಿನ ಅಭಿಮಾನದಿಂದ ಈ ಆಟೋ ಬಯೋಗ್ರಫಿಯನ್ನು ತಯಾರಿಸಿದ್ದೇವೆ. ಅವರ ಜೀವನದ ಅಮೃತಮಹೋತ್ಸವಕ್ಕೆ ಇದೊಂದು ಸಣ್ಣ ಕೊಡುಗೆ