
VIDEO – ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್ : ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ..!

ಹಾವೇರಿ : ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ಮಾಲತೇಶ ದೇವರ ಕಾರ್ಣಿಕ ನುಡಿದಿದ್ದು. ಈ ಬಾರಿ ಯುವಕರೊಬ್ಬರು ರಾಜ್ಯದ ಮುಖ್ಯಮಂತ್ರಿ ಗಾದಿಗೆ ಏರಲಿದ್ದಾರಾ ಎಂಬ ಮಾತು ಕೇಳಿಬರುತ್ತಿದೆ. ಈ ಬಾರಿ ಸಣ್ಣ ಸಣ್ಣ ರೈತರಿಗೂ ಒಳ್ಳೆಯದಾಗಲಿದೆ, ರಾಜಕೀಯವಾಗಿ ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿಸ್ಥಾನ ದೊರೆಯಲಿದೆ ಎಂದು ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ.

ಈ ವರ್ಷ ಬಿಲ್ಲನ್ನೇರಿದ ಗೊರವಪ್ಪ ನಾಗಪ್ಪ ಉರ್ಮಿ ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್ ಎಂದು ಕಾರ್ಣಿಕ ನುಡಿದಿದ್ದಾರೆ. ಬಳಿಕ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಕಾರ್ಣಿಕ ವಾಣಿಯ ವಿಶ್ಲೇಷಣೆ ಮಾಡಿದ್ದಾರೆ. ಸಣ್ಣಸಣ್ಣ ರೈತರಿಗೂ ಈ ವರ್ಷ ಉತ್ತಮ ಆಗಲಿದೆ. ರಾಜಕೀಯವಾಗಿ ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ದೇವರಗುಡ್ಡದ ಗೊರವಯ್ಯ ಅವರು ನುಡಿಯುವ ಕಾರ್ಣಿಕದ ಮೇಲೆ ಜನರಿಗೆ ಮೊದಲಿಂದಲೂ ಅಪಾರ ನಂಬಿಕೆಯಿದೆ. ಕೊರೊನಾ ಹಾವಳಿಯಿಂದಾಗಿ ಕಳೆದೆರಡು ವರ್ಷಗಳಿಂದ ಜಿಲ್ಲಾಡಳಿತದ ಬಿಗಿನಿಯಮದಿಂದಾಗಿ ಕಾರ್ಣಿಕ ವೀಕ್ಷಿಸಲು ಹೆಚ್ಚು ಜನರು ಸೇರುತ್ತಿರಲಿಲ್ಲ. ಆದರೆ ಈ ಬಾರಿ ಅಪಾರ ಜನಸ್ತೋಮ ಸೇರಿದ್ದರು.