Select Page

Advertisement

ಸರಳತೆಯ ಸಾಹುಕಾರನಿಗೆ ಹುಟ್ಟು-ಹಬ್ಬದ ಬರಪೂರ ಶುಭಾಶಯ

ಸರಳತೆಯ ಸಾಹುಕಾರನಿಗೆ ಹುಟ್ಟು-ಹಬ್ಬದ ಬರಪೂರ ಶುಭಾಶಯ

ಬೆಳಗಾವಿ ವಾಯ್ಸ್ ವಿಶೇಷ : ಜಾರಕಿಹೊಳಿ ಮನೆತನದ ಕುಡಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸುಪುತ್ರ ರಾಹುಲ್ ಜಾರಕಿಹೊಳಿಗೆ ಸಧ್ಯ ಹುಟ್ಟು ಹಬ್ಬದ ಸಂಭ್ರಮ. ಜಿಲ್ಲೆಯಾದ್ಯಂತ ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಪ್ರತೀಪೂರ್ವಕ ಶುಭಾಶಯ ತಿಳಿಸುತ್ತಿದ್ದಾರೆ. ಯುವ ಉತ್ಸಾಹಿ ಯುವಕನ ಕುರಿತಾದ ವಿಶೇಷ ಬರಹ.

ಹೌದು ಯಮಕನಮರಡಿ ಮತಕ್ಷೇತ್ರದ ಜನಸಾಮಾನ್ಯರ ಪ್ರೀತಿಯ ಕೂಸಾದ ರಾಹುಲ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಸಾಧನೆಯ ಶಿಕರ ಏರುತ್ತಿದ್ದಾರೆ. ಸಂಕಷ್ಟದಲ್ಲಿದ್ದವರ ಪಾಲಿಗೆ ಮೊದಲು ನೆನಪಾಗುವುದೇ ಇದೇ ರಾಹುಲ್. ಯಾಕೆ ಜನರು ಇವರಮೇಲೆ ಇಷ್ಟೊಂದು ಪ್ರೀತಿ ಹಾಗೂ ಮಮಕಾರ ತೋರಿಸುತ್ತಿದ್ದಾರೆ ಎಂಬುದಕ್ಕೆ ಪ್ರಭಲವಾದ ಕಾರಣವಿದೆ. ಹಾಗಾದ್ರೆ ಏನದು ಕಾರಣ.

ಜನರ ಸಂಕಷ್ಟಕ್ಕೆ ಹೆಗಲು ಕೊಡುವ ಯುವಕ : ಸಧ್ಯ ಯಮಕನಮರಡಿ ಮತಕ್ಷೇತ್ರದ ಶಾಸಕರು ಸತೀಶ್ ಜಾರಕಿಹೊಳಿ. ರಾಜ್ಯಮಟ್ಟದ ನಾಯಕರಾಗಿ ಬೆಳೆದ ಇವರಿಗೆ ಬೃಹತ್ ಜಿಲ್ಲೆಯಾದ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಪಕ್ಷ ಸಂಘಟಿಸುವ ಮಹತ್ವದ ಜವಾಬ್ದಾರಿ ಕೂಡಾ ಇದೆ. ಆದರೆ ಅವರಿಗೆ ಸಾಧ್ಯವಾಷ್ಟು ಸಮಯವನ್ನು ಕ್ಷೇತ್ರದ ಜನರಿಗೆ ಮೀಸಲಿಟ್ಟವರು. ಇನ್ನೂ ಅವರ ಅನುಪಸ್ಥಿತಿಯಲ್ಲಿ ಯುವಕ ರಾಹುಲ್ ಆ ಸ್ಥಾನ ತುಂಬುತ್ತಾರೆ. ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಅತ್ಯಂತ ತ್ವರಿತವಾಗಿ ಅವರ ನೆರವಿಗೆ ನಿಲ್ಲುವ ಗುಣ ಹೊಂದಿದ್ದು ಈ ಯುವಕ.‌ಇದೇ ಕಾರಣಕ್ಕಾಗಿ ರಾಹುಲ್ ಎಂದರೆ ಜನರಿಗೆ ಬಲು ಪ್ರೀತಿ.

ಜನರಿಗಾಗಿ ತನ್ನ ಯೌವನ ಪಣಕ್ಕಿಟ್ಟ ಯುವಕ‌ : ಪ್ರತಿ ವ್ಯಕ್ತಿಯ ಬದುಕಲ್ಲಿ ಅತ್ಯಂತ ಅದ್ಬುತ ಕ್ಷಣ ಅವರ ಬಾಲ್ಯ ಹಾಗೂ ಯೌವನ. ಈ ಸಂದರ್ಭದಲ್ಲಿ ಯುವಕ ರಾಹುಲ್ ಅವೆಲ್ಲವನ್ನೂ ಬದಿಗಿಟ್ಟು ಜನಪರ ಕೆಲಸ ಮಾಡುತ್ತಿರುವುದು ಅದ್ಬುತ. ಈ ಹಿನ್ನಲೆಯಲ್ಲಿ ಅವರ ಪರವಾಗಿ ಇಷ್ಟೊಂದು ದೊಡ್ಡ ಮಟ್ಟದ ಯುವಕರ ತಂಡ ಜೊತೆಯಾಗಿ ನಿಂತಿದ್ದು ಅದ್ಬುತ. ಹಾಗೆಯೇ ದಾರ್ಮಿಕ ಕಾರ್ಯಕ್ರಮ ಇರಲಿ, ಷೇತ್ರದ ಕಾರ್ಯಕ್ರಮ ಇರಲಿ, ಇನ್ನೂ ಸಮಾಜದ ಕಾರ್ಯಕ್ರಮ ಇರಲಿ ಇವೆಲ್ಲವೂದಕ್ಕೂ ಹಾಜರಿರುವ ಇವರ ಗುಣಕ್ಕೆ ಜನ ಮಾರು ಹೋಗಿದ್ದು ಸುಳ್ಳಲ್ಲ.

ಶಾಸಕ ಸತೀಶ್ ಜಾರಕಿಹೊಳಿ ಅವರ ಕನಸಿನ ಕೂಸಾದ ಮಾನವ ಬಂದುತ್ವ ವೇದಿಕೆ ಹಾಗೂ ಸತೀಶ್ ಜಾರಕಿಹೊಳಿ ಫೌಂಡೇಶನ್ ನಲ್ಲಿ ಯುವಕ ರಾಹುಲ್ ಜಾರಕಿಹೊಳಿ ಹಾಗೂ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರ ಪಾತ್ರ ಅದ್ಬುತ. ಅನೇಕ ಸಾರ್ವಜನಿಕ ಕೆಲಸಗಳಲ್ಲಿ ಗುರುತಿಸಿಕೊಂಡ ಇವರು ಸಧ್ಯ ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ ಜನರ ಸಮಸ್ಯೆಗೆ ನೆರವಾಗುವ ಮೂಲಕ ರಾಜಕೀಯ ಭವಿಷ್ಯ ಕಟ್ಟಿಕೊಳ್ಳುತ್ತಿರುವ ಉತ್ಸಾಹಿ ಯುವಕ ರಾಹುಲ್ ಜಾರಕಿಹೊಳಿ ಭವಿಷ್ಯ ಉಜ್ವಲವಾಗಿರಲಿ ಎಂಬುದು ಎಲ್ಲರ ಆಶಯ.

Advertisement

Leave a reply

Your email address will not be published. Required fields are marked *