ಉಚಿತ ಆರೋಗ್ಯ ತಪಾಸಣಾ ಶಿಬಿರ ಸದ್ಭಳಕೆಗೆ
ಡಾ. ಸುರಜ್ ಹೊನಕಾಂಬಳೆ ಸಲಹೆ
ಕಾಗವಾಡ: ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುರಜ್ ಹೊನಕಾಂಬಳೆ ಹೇಳಿದರು.
ತಾಲೂಕಿನ ಉಗಾರ ಬಿಕೆ ಗ್ರಾಮದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಭವನದಲ್ಲಿ ಬುಧವಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಹಮ್ಮಿಕೊಳ್ಳಲಾದ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯವೇ ಭಾಗ್ಯ ಎಂಬ ತತ್ವದಡಿಯಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ,ಚಿಕಿತ್ಸೆ ಒದಗಿಸುವುದು ಶಿಬಿರದ ಉದ್ದೇಶವಾಗಿದೆ. ಕಣ್ಣು, ಚರ್ಮ, ಬಿಪಿ, ಶುರಗ್, ಎಚ್ ಐವಿ ಹಾಗೂ ಟಿಬಿ ಸೇರಿದಂತೆ ಮುಂತಾದ ರೋಗಗಳ ತಪಾಸಣೆ ಮಾಡಲಾಗುವುದು ಗ್ರಾಮೀಣ ಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪಿಡಿಓ ಬಾಬು ಐತವಾಡೆ ಮಾತನಾಡಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದೆ. ಗ್ರಾಮೀಣ ಭಾಗದ ಜನತೆಗೆ ಉದ್ಯೋಗ ಒದಗಿಸುವ ಜೊತೆಗೆ ಗ್ರಾಮ ಅಭಿವೃದ್ಧಿ ಒತ್ತು ನೀಡುತ್ತಿದೆ. ಕೂಲಿಕಾರರ ಆರೋಗ್ಯದ ಹಿತದೃಷ್ಟಿಯಿಂದ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಲ್ಲರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನರೇಗಾ ಯೋಜನೆ ಕರ ಪತ್ರ ಹಂಚಿಕೆ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ನೂರಾರು ಜನ ಶಿಬಿರದ ಪ್ರಯೋಜನ ಪಡೆದುಕೊಂಡರು.
ಗ್ರಾಪಂ ಉಪಾಧ್ಯಕ್ಷೆ ಆಶಾ ಪೂಜಾರಿ, ಸಂಗಮೇಶ ಪಡದಾನೂರ, ದಿಲಾವರ್ ನೇಜಕರ್, ಶ್ರಾವಣ ಗೊಂದಳಿ, ಪದ್ಮಣ್ಣ ಚೌಗಲೇ, ಸಮಾಲೋಚಕಿ ಪ್ರಿಯಾಂಕಾ ಕಾಂಬಳೆ, ಐಸಿಟಿಸಿ ಸಮಾಲೋಚಕ ಗವೀಶ ರಾಮದುರ್ಗ, ಆರೋಗ್ಯ ಸಿಬ್ಬಂದಿ ಗೋವಿಂದ ಪೂಜಾರಿ, ಪ್ರಕಾಶ, ಶೋಭಾ ಕಾಮಕರ್, ತಾಂತ್ರಿಕ ಸಂಯೋಜಕರ ಗುರುಪ್ರಸಾದ ಸೋಮನ್ನವರ್, ಐಇಸಿ ಸಂಯೋಜಕರ ಅಮೀತ ಇಂಗಳಗಾಂವಿ, ಟಿಎಮ್ ಐ ಎಸ್ ಸುರೇಶ ಬಳೋಲ, ಕೆಎಚ್ ಪಿಟಿ ಸಂಯೋಜಕ ರಾಮಗೌಡಾ ಪಾಟೀಲ್, ಆದಿನಾಥ ಚೌಗಲೇ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.