ದೇವಲತ್ತಿ ಲಕ್ಷ್ಮೀ ದೇವಿ ಜಾತ್ರೆಗೆ ಅನುಮತಿ ನೀಡುವಂತೆ ಡಾ. ಸೋನಾಲಿ ಮನವಿ
ಬೆಳಗಾವಿ : ಖಾನಾಪುರ ತಾಲೂಕಿನ ದೇವಲತ್ತಿ ಗ್ರಾಮದ ಶ್ರೀ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸಿ ಬುಧವಾರ ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲೆಯ ಮಹಿಳಾ ಘಟಕದ ಅಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ನೇತೃತ್ವದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
ಕಳೆದ 26 ವರ್ಷಗಳ ಬಳಿಕ ಖಾನಾಪುರ ತಾಲೂಕಿನ ದೇವಲತ್ತಿ ಗ್ರಾಮದ ಶ್ರೀ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ಜರುಗುತ್ತಿದೆ. ಏ.12 ರಿಂದ 20ರವರೆಗೆ 9 ದಿನಗಳ ಕಾಲ ಜಾತ್ರೆ ನಡೆಸುವುದಾಗಿ ದೇವಸ್ಥಾನದ ಕಮಿಟಿ ತಿರ್ಮಾನ ಮಾಡಿದೆ. ಜಿಲ್ಲಾಡಳಿತ ಅನುಮತಿ ನೀಡುವುದರ ಜತೆಗೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ ನೀಡುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಜಾತ್ರಾ ಮಹೋತ್ಸವ ಸರಾಗವಾಗಿ ನಡೆಸಲು ಪೂರಕವಾಗಿ ಅನುಮತಿ ನೀಡುವ ಜೊತೆಗೆ ಜಾತ್ರಾ ಮಹೋತ್ಸವದ ಸಂದರ್ಬದಲ್ಲಿ ವೈದ್ಯಕೀಯ ಸೇವೆ , 24 ಗಂಟೆಗಳ ಕಾಲ ನಿರಂತರ ಸೌಲಭ್ಯ , ಕುಡಿಯುವ ನೀರಿನ ಸರಬರಾಜು , ಸಾರಿಗೆ ಬಸ್ ಸೇವೆ , ಸಾಂಸ್ಕೃತಿಕ ಕಾರ್ಯಕ್ರಮಗಳು , ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಿದರು. ಈ ವೇಳೆ ಜಾತ್ರಾ ಪಂಚ ಕಮಿಟಿ ಹಾಗೂ ಹನುಮಂತ ಗಂದಿವಾಡ್, ವಿಠ್ಠಲ ನೀಡಗಲಕರ ಉಪಸ್ಥಿತರಿದ್ದರು.