ಪತ್ರಕರ್ತ ಅರುಣ್ ಹೊಸಮಠ ಹೊಸ ಮೈಲುಗಲ್ಲು
ಬೆಳಗಾವಿ : ಧಾರವಾಡ ವಿವಿಯ ಪತ್ರಿಕೋದ್ಯಮ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾದ ಅರುಣ ಹೊಸಮಠ ಅವರ ಪಿಎಚ್.ಡಿ ಮೌಖಿಕ ಪರೀಕ್ಷೆ ಇಂದು ಶುಕ್ರವಾರ ಜರುಗಿತು.
ಅರುಣ ಹೊಸಮಠ ಅವರು ಡಾ. ಎಂ.ಗಂಗಾಧರಪ್ಪ ಸರ್ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಪತ್ರಿಕೆಗಳಲ್ಲಿ ನಾಗರಿಕರ ಬರವಣಿಗೆ – ಒಂದು ಅಧ್ಯಯನ’ ವಿಷಯದ ಕುರಿತಾಗಿ ಮಹಾಪ್ರಬಂಧ ಮಂಡಿಸಿದ್ದರು.
ಬೆಂಗಳೂರಿನ ಡಾ.ವಾಹಿನಿ ಅರವಿಂದ ಅವರ ನೇತೃತ್ವದಲ್ಲಿ ಮೌಖಿಕ ಪರೀಕ್ಷೆ ಜರುಗಿತು. ವಿಭಾಗದ ಮುಖ್ಯಸ್ಥರಾದ ಪ್ರೊ.ಜೆ.ಎಂ. ಚಂದುನವರ, ಡಾ. ನಾಗರಾಜ ಹಳ್ಳಿಯವರ, ಡಾ. ಸಂಜಯಕುಮಾರ ಮಾಲಗತ್ತಿ, ಡಾ. ಮಂಜುನಾಥ ಅಡಿಗಲ್ ಮತ್ತು ವಿನಾಯಕ ಎತ್ತಿನಮನಿ ಉಪಸ್ಥಿತರಿದ್ದರು.
ಅರುಣ ಹೊಸಮಠ ಬೆಳಗಾವಿ ಜಿಲ್ಲೆಯ ವಿಜಯವಾಣಿ ವರದಿಗಾರರಾಗಿ, ರಾಣಿ ಚನ್ನಮ್ಮ ವಿವಿಯಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪರಾಗಿ ಸೇವೆ ಸಲ್ಲಿಸಿದ್ದರು.