
VIDEO-ಹಿಜಾಬ್ ತೆಗೆದು ಟಿಕ್ ಟಾಕ್ ಮಾಡೋವಾಗ ಬಾಯ್ಸ್ ನೋಡಲ್ವಾ: ವಿದ್ಯಾರ್ಥಿನಿ ಪ್ರಶ್ನೆ

ಬೆಳಗಾವಿ : ಹಿಜಾಬ್.. ಹಿಜಾಬ್ ಅನ್ನೋರು ಟಿಕ್ ಟಾಕ್ ಮಾಡೋವಾಗ ಹಿಜಾಬ್ ತಗೆದು ವಿಡಿಯೋ ಮಾಡುತ್ತಾರೆ. ಅವಾಗ ಯಾರೂ ಬಾಯ್ಸ್ ನೋಡಲ್ವಾ ನಾಲ್ಕು ಗೋಡೆ ಮಧ್ಯೆ ಎಲ್ಲ ವಿದ್ಯಾರ್ಥಿಗಳು ಒಂದೆ ಇರಬೇಕು. ನಮಗೆ ಶಿಕ್ಷಣ ಮುಖ್ಯ ಎಂದು ವಿಜಯಾ ಪ್ಯಾರಾ ಮೆಡಿಕಲ್ ಸೈನ್ಸ್ ವಿದ್ಯಾರ್ಥಿನಿ ಪ್ರತಿಕ್ರಯಿಸಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಬಾಯ್ಸ್ ನೋಡುತ್ತಾರೆ ಎಂದು ಹಿಜಾಬ್ ಧರಿಸಿಕೊಂಡು ಬರುವವರು ಮನೆಯಲ್ಲಿ ಹಿಜಾಬ್ ತೆಗೆಯುವುದಿಲ್ಲವಾ.? ಟಿಕ್ ಟಾಕ್ ಮಾಡುವಾಗ ಹಿಜಾಬ್ ತೆಗೆದೆ ವಿಡಿಯೋ ಮಾಡುತ್ತಾರೆ. ಅವಾಗ ಅವರನ್ನ ಬಾಯ್ಸ್ ನೋಡಲ್ವಾ ಎಂದು ಪ್ರಶ್ನಿಸಿದರು.
ತರಗತಿಗಳು ಎಂದಿನಂತೆ ಪ್ರಾರಂಭವಿತ್ತು. ಗುರುವಾರದಿಂದಲೇ ಸಮಸ್ಯೆ ಎದುರಾಗಿದೆ. ಕಾಲೇಜಿನಲ್ಲಿ ತರಗತಿಗಳು ನಡೆಯುತ್ತಿವೆ. ಇಂದು ಬೆಳಗ್ಗೆಯಿಂದಲೇ ಎರಡು ಕ್ಲಾಸ್ ಸಮಸ್ಯೆಯಾಯಿತು. ಕೆಲ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡು ಬಂದಿದ್ದರಿಂದ ವಿವಾದ ಮಾಡಿದರು. ನಿನ್ನೆಯೂ ಸಹ ಇವರೆ ಹೊರಗಡೆಯಿಂದ ಯುವಕರನ್ನು ಕರೆಸಿ ಗಲಾಟೆ ಮಾಡಿಸಿದರು ಎಂದು ದೂರಿದರು.
ಹಿಜಾಬ್ ಧರಿಸಲು ಕಾಲೇಜಿನವರು ಇವರಿಗೆ ಅನುಮತಿ ನೀಡಿದ್ದಾರೆ. ಕಾಲೇಜಿನ ಗೇಟ್ ಒಳಗಡೆ ಬಂದಾಗ ಮಾತ್ರ ತೆಗೆದು ಕುಳಿತುಕೊಳ್ಳಬೇಕು ಎಂದಿದ್ದಾರೆ. ಆದರೆ ಕೆಲ ವಿದ್ಯಾರ್ಥಿಗಳು ವಿವಾದ ಮಾಡುತ್ತಿದ್ದಾರೆ. ನ್ಯಾಯಾಲಯದ ತೀರ್ಪು ಬರುವವರೆಗೂ ಹಿಜಾಬ್ ತೆಗೆದು ಕುಳಿತುಕೊಳ್ಳಬೇಕು.