ಹೆಲ್ಪಿಂಗ್ ಹ್ಯಾಂಡ್ ಸಂಘಟನೆ ವತಿಯಿಂದ ಬೈಲಹೊಂಗಲ ನಗರದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಜಾಗೃತಿ ಜಾಥಾ.
ಬೈಲಹೊಂಗಲ : ನಗರದಲ್ಲಿ soul wave helping hand ತಂಡದ ಸದಸ್ಯರಿಂದ ಪರಿಸರ ಮಾಲಿನ್ಯ ನಿಯಂತ್ರಣ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಬೆಳಗಾವಿ ರಸ್ತೆಯಲ್ಲಿರುವ ವೀರ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮಾಜಿ ಪುತ್ತಳಿಗೆ ಮಾಲಾರ್ಪಣೆ ಮಾಡುವುದರ ಮುಖಾಂತರ ಜಾಥಾ ಗೆ ಚಾಲನೆ ನೀಡಲಾಯಿತು. ನಗರದ ಇಂಚಲ ಕ್ರಾಸ್, ಬಸ್ ನಿಲ್ದಾಣದ ಮುಂಬಾಗದಲ್ಲಿ ಹೆಲ್ಪಿಂಗ್ ಹ್ಯಾಂಡ್ ತಂಡದ ಕಾರ್ಯಕರ್ತರು ಮಾಲಿನ್ಯ ಅಳಿಸಿ,ಪರಿಸರ ಉಳಿಸಿ,ಎಂಬ ಘೋಷಣೆ ಕೂಗುತ್ತ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿದರು.
ಇನ್ನು ಬೈಲಹೊಂಗಲ ಸಿಪಿಐ ಯು,ಏಚ್, ಸಾತೆನಹಳ್ಳಿ ನಗರದಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉದ್ಯಾನವನದಲ್ಲಿ ರಾಯನ್ನನವರ ಪುತ್ತಳಿಗೆ ಮಾಲಾರ್ಪಣೆ ಮಾಡಿ,helping hands ತಂಡದ ವತಿಯಿಂದ ಸಾರ್ವಜನಿಕರಿಗೆ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಸಸಿ ವಿತರಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ.
ತಂಡದ ಸದಸ್ಯರಾದ ಯೋಗಗುರು ಡಾಕ್ಟರ್, ಸಂಗಮೇಶ್ ಸವದತ್ತಿಮಠ ಮಾತನಾಡಿ,ಮನುಷ್ಯರು ರೋಗರುಜಿನ ಬಂದಮೇಲೆ ಪರಿಹಾರ ಹುಡುಕುವುದಕ್ಕಿಂತ ರೋಗರುಜಿನಗಳು ಬರುವ ಮೊದಲೇ ಜಾಗೃತಿ ವಹಿಸಬೇಕು.ಹಾಗೂ ಪರಿಸರ ಸ್ನೇಹಿ ಗಣಪತಿಗಳನ್ನು ಪೂಜಿಸುವಂತೆ ಸಲಹೆ ನೀಡಿದರು.
ಈ ಜಾಗೃತಿ ಜಾಥಾದಲ್ಲಿ ತಂಡದ ಸದಸ್ಯರಾದ
ಶಾಂತವೀರೇಶ ಹಿರೇಮಠ, ಗೌತಮ್ ಇಂಚಲ,
ಸೂರಜ್ ಮತ್ತಿಕೊಪ್ಪ, ಪ್ರಫುಲ್ ಉಳ್ಳೇಗಡ್ಡಿ,
ಶರಣು ಹೂಲಿ,ಅರ್ಜುನ ಕಲಕುಟಕರ, ವಿನಯ್ ಬೋಳಣ್ಣವರ, ಹರ್ಷ ಪೂಜೇರಿ, ಸೋಮನಾಥ ಸೊಪ್ಪಿಮಠ, ವಿನಯ್ ಪರಿಟ್, ಶೊಯೆಬ್ ಸಂಗೊಳ್ಳಿ,
ಧೀಮಂತ ಪಾಟೀಲ್, ಪ್ರಕಾಶ್ ಕಮ್ಮಾರ, ಈಶ್ವರ ಶಿಲ್ಲೇದಾರ, ಸತೀಶ ಅರವಳ್ಳಿ, ವೀರೇಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.