ಗ್ರಂಥಾಲಯಕ್ಕೆ ಮೂಲಭೂತ ಸೌಕರ್ಯ ಒದಗಿಸುವಂತೆ ಮನವಿ
ಮುಗಳಖೋಡ : ಪಟ್ಟಣದ ಗ್ರಂಥಾಲಯಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಮಾನವ ಹಕ್ಕುಗಳ ಆಯೋಗದ ಉತ್ತರ ಕರ್ನಾಟಕ ಕಾರ್ಯಾಧ್ಯಕ್ಷ ಸಂತೋಷ ಅರಭಾವಿ ಮನವಿ ಸಲ್ಲಿಸಿದರು.
ಬುಧವಾರ ಪಟ್ಟಣದ ಗ್ರಂಥಪಾಲರಿಗೆ ಮೂಲಕ ಜಿಲ್ಲಾ ಗ್ರಂಥಾಲಯ ಉಪ ನಿರ್ಧೇಶಕರಿಗೆ ಮನವಿ ಸಲ್ಲಿಸಿದ ಇವರು. ಮುಗಳಖೋಡ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿರುವ ಗ್ರಂಥಾಲಯಕ್ಕೆ ಮೂಲಭ ಸೌಕರ್ಯ ಒದಗಿಸಬೇಕು. ಪುಸ್ತಕ ಇಡಲು ಇಲ್ಲಿ ಸರಿಯಾದ ಕಪಾಟು ವ್ಯವಸ್ಥೆ ಇಲ್ಲ. ಕೂಡಲೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಸಂತೋಷ ಅರಭಾವಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾನಿ, ಸುನಿಲ್ ನಾಯಿಕ, ಪ್ರಕಾಶ್ ಶೇಗುಣಸಿ, ಮಹಾಂತೇಶ್ ಕುರಾಡೆ, ನವೀನ್ ಹುಣಸಿಕಟ್ಟಿ, ಗುತ್ತಿಗೆದಾರ ಸಿದ್ದು ಯರಡೇತ್ತಿ, ಯಲ್ಲೂ ಗೋಕಾಕ್ ಉಪಸ್ಥಿತರಿದ್ದರು.