
ಖಾಸಗಿ ಸುದ್ದಿ ಸಂಸ್ಥೆಯಿಂದ ಬದಲಾವಣೆ ಬೆಳಕು ಫೌಂಡೇಶನ್ ಅಧ್ಯಕ್ಷರಿಗೆ ಪ್ರಶಸ್ತಿ

ಬೆಳಗಾವಿ : ರಾಜ್ಯದ ಖಾಸಗಿ ಸುದ್ದಿವಾಹಿನಿ ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ಹಾಗೂ ಕಲಾಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ ಕರುನಾಡ ಸಾಧಕರು ಪ್ರಶಸ್ತಿಯನ್ನು ಬೆಳಗಾವಿ ಬದಲಾವಣೆ ಬೆಳಕು ಫೌಂಡೇಶನ್ ಅಧ್ಯಕ್ಷ ಶಿವಾನಂದ ಹಿರಟ್ಟಿ ಅವರಿಗೆ ನೀಡಲಾಯಿತು.
ಬುಧವಾರ ಬೆಂಗಳೂರಿನ ವೀರಶೈವ ಭವನದಲ್ಲಿ ಆಯೋಜಿಸಲಾಗಿದ್ದ ಕರುನಾಡ ಸಾಧಕರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ, ಸಮಾಜಸೇವೆ ಹಾಗೂ ಬದಲಾವಣೆ ಬೆಳಕು ಫೌಂಡೇಶನ್ ಕಾರ್ಯಕ್ರಮಗಳ ಸೇವೆಯನ್ನು ಪರಿಗಣಿಸಿ
ಅಧ್ಯಕ್ಷರಾದ ಶಿವಾನಂದ ಹಿರಟ್ಟಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.